ಹುಬ್ಬಳ್ಳಿ: ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂತೃಪ್ತಿ ಸೂಚ್ಯಂಕ ವರದಿಯನ್ನು ಭಾರತ ವಿಮಾನ ನಿಲ್ದಾಣಗಳ ಪ್ರಾಧಿಕಾರವು (ಎಎಐ) ಬಿಡುಗಡೆ ಮಾಡಿದ್ದು, ಹುಬ್ಬಳ್ಳಿ ವಿಮಾನ ನಿಲ್ದಾಣವು ಕಳೆದ ವರ್ಷಕ್ಕಿಂತ 0.2ರಷ್ಟು ಹೆಚ್ಚಿನ ಅಂಕ ಪಡೆದಿದೆ. ದೇಶದ 62 ವಿಮಾನ ನಿಲ್ದಾಣಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣವು 8ನೇ ಸ್ಥಾನದಲ್ಲಿದೆ.
ವಿಮಾನ ನಿಲ್ದಾಣದಲ್ಲಿ ಸುರಕ್ಷತೆ, ಸ್ವಚ್ಛತೆ, ಸರಕು ಸಾಗಣೆ ವ್ಯವಸ್ಥೆ, ಸಹಾಯ ಒದಗಿಸುವ ಬಗೆ, ವಿಮಾನಗಳ ಆಗಮನ–ನಿರ್ಗಮನ ವೇಳಾ ಪಟ್ಟಿ ಪ್ರದರ್ಶನ, ಕಾಯುವ ವ್ಯವಸ್ಥೆ, ತಪಾಸಣೆ ವ್ಯವಸ್ಥೆ ಸೇರಿ ಒಟ್ಟು 33 ಮಾನದಂಡ ಆಧರಿಸಿ ಪ್ರತಿ ಆರು ತಿಂಗಳಿಗೊಮ್ಮೆ ಪ್ರಯಾಣಿಕರ ಸಂತೃಪ್ತಿ ಸೂಚ್ಯಂಕ ವರದಿ ಹಾಗೂ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ.
2024ನೇ ಸಾಲಿನಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣವು 5 ಅಂಕಗಳ ಪೈಕಿ 4.91 ಅಂಕ ಪಡೆದಿತ್ತು. ಈ ಸಲ 4.93 ಅಂಕ ಪಡೆದಿದೆ. ಮೈಸೂರು, ಕಲಬುರಗಿ ವಿಮಾನ ನಿಲ್ದಾಣಗಳು 16ನೇ ಸ್ಥಾನದಲ್ಲಿ ಹಾಗೂ ಬೆಳಗಾವಿ 7ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ರಾಜಸ್ತಾನದ ಉದಯಪುರ ವಿಮಾನ ನಿಲ್ದಾಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.