
ಪ್ರಜಾವಾಣಿ ವಾರ್ತೆ
ಧಾರವಾಡ: ‘ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ತಹಶೀಲ್ದಾರ್ (ಗ್ರೇಡ್–2) ಅವರು ವ್ಯಕ್ತಿಯೊಬ್ಬರ ಜಾತಿ ವಿಚಾರದಲ್ಲಿ ತಪ್ಪು ಮಾಹಿತಿ ನೀಡಿರುವುದಕ್ಕೆ ದೂರನ್ನು ಉಪನಗರ ಠಾಣೆ ಪೊಲೀಸರು ಸ್ವೀಕರಿಸುತ್ತಿಲ್ಲ’ ಎಂದು ಅರುಣ್ ಎಸ್.ಹಿರೇನಾಳ್ ಆರೋಪಿಸಿದರು.
‘ಬ್ಯಾಡ ಜಾತಿಯು ಹಿಂದುಳಿದ ವರ್ಗದ ಪ್ರವರ್ಗ–1 ಪಟ್ಟಿಯಲ್ಲಿದೆ ಎಂದು ಹುಕ್ಕೇರಿಯ ತಹಶೀಲ್ದಾರ್ (ಗ್ರೇಡ್–2) ಅವರು ಮಾಹಿತಿ ನೀಡಿದ್ಧಾರೆ. ಇದು ತಪ್ಪು ಮಾಹಿತಿ. ಹುಕ್ಕೇರಿಯ ತಹಶೀಲ್ದಾರ್ (ಗ್ರೇಡ್–2) ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದರೆ ಪೊಲೀಸರು ಸ್ವೀಕರಿಸುತ್ತಿಲ್ಲ’ ಎಂದು ಅರುಣ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.