ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರದ ಕೆಎಲ್‌ಇ ಸಂಸ್ಥೆಯ ಪ್ರೇರಣಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಿಇಟಿಯಲ್ಲಿ ಉತ್ತಮ ರ‍್ಯಾಂಕ್ ಪಡೆದಿದ್ದಾರೆ.
ಎಂಜಿನಿಯರಿಂಗ್ ವಿಭಾಗದಲ್ಲಿ ನರೇಂದ್ರ ವಿನೋದ ನಾಯಕ 328ನೇ ರ‍್ಯಾಂಕ್, ಬಿ.ಎಸ್ಸಿ ಅಗ್ರಿಕಲ್ಚರ್ ವಿಭಾಗದಲ್ಲಿ 556ನೇ ರ‍್ಯಾಂಕ್ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಎಂಜಿನಿಯರಿಂಗ್‌ನಲ್ಲಿ ವಿನುತಾ ಫಡ್ನೀಸ್ 4,592ನೇ ರ‍್ಯಾಂಕ್, ಓಂಕಾರ ಜಯಪ್ರಕಾಶ ಪಟ್ಟಣದ 4,789, ಕ್ರಾಂತಿ ಕಾಜಾ 4,915, ಕಮಲ ಪಿ.ಮೇಘರಾಜ 6,855, ಕಾರ್ತಿಕ ಪಾಂಡುರಂಗಸಾ ನಾಕೋಡ 8,137ನೇ ರ‍್ಯಾಂಕ್ ಪಡೆದಿದ್ದಾರೆ.
ಕ್ರಾಂತಿ ಕಾಜಾ, ಬಿ.ಎಸ್ಸಿ ಅಗ್ರಿಕಲ್ಚರ್ ವಿಭಾಗದಲ್ಲಿ 1,625ನೇ ರ‍್ಯಾಂಕ್ ಹಾಗೂ ಬಿಎನ್‌ವೈಎಸ್ ವಿಭಾಗದಲ್ಲಿ 3,520ನೇ ರ‍್ಯಾಂಕ್, ವೆಟರ್ನರಿ ವಿಭಾಗದಲ್ಲಿ 1,978ನೇ ರ‍್ಯಾಂಕ್ ಪಡೆದಿದ್ದಾರೆ.
ವಿದ್ಯಾರ್ಥಿಗಳನ್ನು ಕೆಎಲ್‌ಇ ಸಂಸ್ಥೆಯ ಚೇರ್ಮನ್ ಪ್ರಭಾಕರ ಕೋರೆ, ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಸಮ ಕುಲಪತಿ ಅಶೋಕ ಶೆಟ್ಟರ್, ಪ್ರಾಚಾರ್ಯ ಪ್ರೊ.ಕುಮಾರಸ್ವಾಮಿ ಮೇವುಂಡಿಮಠ, ಪ್ರಾಧ್ಯಾಪಕರು, ಸಿಬ್ಬಂದಿ ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.