ADVERTISEMENT

ಪರಿಶಿಷ್ಟರ ಕಾಲೊನಿ ಅಭಿವೃದ್ಧಿಗೆ ಆದ್ಯತೆ: ಶಾಸಕ ಎಂ.ಆರ್. ಪಾಟೀಲ

ವಿವಿಧ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 15:47 IST
Last Updated 15 ಜೂನ್ 2025, 15:47 IST
ಗುಡಗೇರಿ ಗ್ರಾಮದಲ್ಲಿ ಶಾಸಕ ಎಂ.ಆರ್. ಪಾಟೀಲ ಅವರನ್ನು ಗೌರವಿಸಲಾಯಿತು
ಗುಡಗೇರಿ ಗ್ರಾಮದಲ್ಲಿ ಶಾಸಕ ಎಂ.ಆರ್. ಪಾಟೀಲ ಅವರನ್ನು ಗೌರವಿಸಲಾಯಿತು   

ಗುಡಗೇರಿ: ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಯ ಕಾಲೊನಿಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಶಾಸಕ ಎಂ.ಆರ್. ಪಾಟೀಲ ಹೇಳಿದರು.

ಗ್ರಾಮದ ಎಸ್.ಸಿ. ಕಾಲೊನಿಯ ಸಿ.ಸಿ ರಸ್ತೆ ಹಾಗೂ ಚರಂಡಿ ನಿರ್ಮಾಣದ ₹25 ಲಕ್ಷದ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿ, ‘ಈ ಸಮುದಾಯವು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಬೇಕು. ನಮ್ಮ ಅಧಿಕಾರ ಅವಧಿಯಲ್ಲಿ ಈ ಸಮುದಾಯದ ಕಾಲೊನಿಗಳಿಗೆ ಮೂಲಸೌಲಭ್ಯ ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ’ ಎಂದರು.

‘ಈ ಕಾಲೊನಿಗೆ ಹೊಂದಿಕೊಂಡಿರುವ ವಡ್ಡರ ಗುಂಡಿಯಿಂದ ಇಲ್ಲಿ ನಿವಾಸಿಗಳಿಗೆ ತೊಂದರೆ ಉಂಟಾಗಿದ್ದು, ಗುಂಡಿ ಮುಚ್ಚಲು ಪ್ರಯತ್ನಿಸುವೆ’ ಎಂದು ಭರವಸೆ ನೀಡಿದರು.

ADVERTISEMENT

ಗ್ರಾಮ ಪಂಚಾಯಿತಿ ಅಧ್ಯಕ್ಷೆ ದ್ರಾಕ್ಷಾಯಿಣಿ ಶಿರೂರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲತೇಶ ಶ್ಯಾಗೋಟಿ, ಬಿಜೆಪಿ ಗ್ರಾಮ ಮಂಡಲ ಅಧ್ಯಕ್ಷ ಚಂದ್ರು ಮಳಲಿ, ಎಸ್.ಡಿ. ಮಾಳಗಿ, ಮುಖಂಡರಾದ ಎಫ್.ಎಸ್. ಬೆಂಗೇರಿ, ಅಜ್ಜಯ್ಯ ರಟ್ಟಿಗೇರಿಮಠ, ಬಸನಗೌಡ ಕರೆಹೂಳಲಪ್ಪನವರ, ಬಸವರಾಜ ನಾಗನಾಯ್ಕರ, ವಿಶ್ವೇಶ್ವರ ಮಳಲಿ, ಅಪ್ಪಣ್ಣ ಹುಂಡೇಕರ, ಅಶೋಕ ರೊಟ್ಟಿಗವಾಡ, ಭರತೇಶ ಸುಮಾಪೂರ, ಬಸವರಾಜ ಗೋವಿಂದಪ್ಪನವರ, ದೇವರಾಜ ದಾಣ್ಣನವರ, ರಾಮಣ್ಣ ಗುಕ್ಕನವರ, ದೇವರಾಜ ತಿರ್ಲಾಪುರ, ಆರಿಫ್ ಖಾನಜಾದೆ, ಶರೀಫ್ ದೊಡ್ಡಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.