ADVERTISEMENT

ಹುಬ್ಬಳ್ಳಿ | ನೈರುತ್ಯ ರೈಲ್ವೆ: ಜುಲೈನಲ್ಲಿ ₹ 286.28 ಕೋಟಿ ಆದಾಯ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 16:12 IST
Last Updated 1 ಆಗಸ್ಟ್ 2024, 16:12 IST
ನೈರುತ್ಯ ರೈಲ್ವೆ
ನೈರುತ್ಯ ರೈಲ್ವೆ   

ಹುಬ್ಬಳ್ಳಿ: ನೈರುತ್ಯ ರೈಲ್ವೆಯು ಕಳೆದ ಜುಲೈ ತಿಂಗಳಲ್ಲಿ ವಿವಿಧ ವಿಭಾಗಗಳಲ್ಲಿ ಗಣನೀಯ ಬೆಳವಣಿಗೆ ಸಾಧಿಸಿದೆ.  ಪ್ರಯಾಣಿಕರಿಂದ ₹ 286.28 ಕೋಟಿ ಆದಾಯ ಗಳಿಸಿದೆ. ಇದು ಹಿಂದಿನ ವರ್ಷದ ₹ 266.27 ಕೋಟಿಗೆ ಹೋಲಿಸಿದರೆ ಶೇ 7.51 ರಷ್ಟು ಹೆಚ್ಚಳವಾಗಿದೆ.

ಪಾರ್ಸಲ್‌ ಆದಾಯವು ₹ 14.19 ಕೋಟಿಗೆ  ತಲುಪಿದ್ದು,  ಹಿಂದಿನ ವರ್ಷ ₹ 12.83 ಕೋಟಿ ಗಳಿಸಿತ್ತು. ಶೇ 10.60ರಷ್ಟು ಏರಿಕೆಯಾಗಿದೆ. ಹೆಚ್ಚುವರಿಯಾಗಿ, ಇತರ ಕೋಚಿಂಗ್ ಆದಾಯವು ಕಳೆದ ವರ್ಷದ ₹ 23.67 ಕೋಟಿಯಿಂದ ₹ 25.01 ಕೋಟಿಗೆ ಏರಿದೆ. ಶೇ 5.66ರಷ್ಟು ವೃದ್ಧಿಯಾಗಿದೆ. 

ಈ ಅವಧಿಯಲ್ಲಿ 13.25 ಮಿಲಿಯನ್‌ (ದಶಲಕ್ಷ) ಜನರು ಪ್ರಯಾಣಿಸಿದ್ದಾರೆ. ಹಿಂದಿನ ವರ್ಷದಲ್ಲಿ 13 ದಶಲಕ್ಷ ಜನರು ಪ್ರಯಾಣಿಸಿದ್ದರು. ಶೇ 1.92 ವೃದ್ಧಿಯಾಗಿದೆ. ಟಿಕೆಟ್ ಇಲ್ಲದೇ ಪ್ರಯಾಣಿಸಿದ್ದ 42 ಸಾವಿರ ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ ₹ 2.32 ಕೋಟಿ ಹೆಚ್ಚುವರಿ ಆದಾಯ ಗಳಿಸಿದೆ. 

ADVERTISEMENT

ಸರಕು ಸಾಗಾಟದಿಂದ ₹ 329.68 ಕೋಟಿ ಆದಾಯ ಬಂದಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.