ಧಾರವಾಡ: ನಗರದಲ್ಲಿ ಮಂಗಳವಾರ ಮಳೆ ಸುರಿಯಿತು. ಕೆಎಂಎಫ್, ಎನ್‌ಟಿಟಿಎಫ್ ಮುಂಭಾಗದ ರಸ್ತೆಯಲ್ಲಿ ನೀರು ಆವರಿಸಿ ಕೆಲ ಹೊತ್ತು ಸಂಚಾರಕ್ಕೆ ತೊಡಕಾಗಿತ್ತು.
ಗುಡುಗು, ಮಿಂಚಿನ ಆರ್ಭಟ ಜೋರಾಗಿತ್ತು. ಗಾಳಿಯ ರಭಸ ಇತ್ತು. ಕೆಲವೆಡೆ ಚರಂಡಿಗಳ ನೀರು ರಸ್ತೆಗೆ ಹೊರಳಿತ್ತು. ನಗರದ ಕೆಲವೆಡೆ ವಿದ್ಯುತ್ ಪೂರೈಕೆ ಕಡಿತವಾಗಿತ್ತು.
ತಾಲ್ಲೂಕಿನ ಉಪ್ಪಿನಬೆಟಗೇರಿ ಗ್ರಾಮದ ಮಾರುಕಟ್ಟೆ ರಸ್ತೆ, ಗ್ರಾಮದೇವಿ ದೇಗುಲ ಭಾಗದಲ್ಲಿ ಚರಂಡಿ ನೀರು ರಸ್ತೆಗೆ, ತಗ್ಗು ಭಾಗದಲ್ಲಿನ ಮನೆಗಳಿಗೆ ನುಗ್ಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.