ಧಾರವಾಡ: ನಗರದಲ್ಲಿ ಗುಡುಗುಸಹಿತ ಮಳೆಯಾಗಿದ್ದು, ಜಿಲ್ಲಾಧಿಕಾರಿ ಕಚೇರಿ ಸಮೀಪ ನಿರ್ಮಿಸುತ್ತಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಕಾಮಗಾರಿ ನಿಟ್ಟಿನಲ್ಲಿ ಅಳವಡಿಸಿದ್ದ ಕಟ್ಟಿಗೆ ತುಂಡುಗಳು ಕುಸಿದುಬಿದ್ದಿವೆ.
ಗೋಡೆ ಭಾಗದಲ್ಲಿ ಕಟ್ಟಿಕೊಂಡಿದ್ದ ತುಂಡುಗಳು ಗಾಳಿ ಆರ್ಭಟಕ್ಕೆ ಬಿದ್ದಿವೆ. ಕಾಮಗಾರಿ ಸ್ಥಳದ ರಸ್ತೆ ಬದಿಯಲ್ಲಿ ನಿಂತಿದ್ದ ಬಸ್ಸೊಂದರ ಮೇಲೆ ಕೆಲವು ತುಂಡುಗಳು ಬಿದ್ದಿವೆ. ಅವಘಡ ಸಂಭವಿಸಿದಾಗ ಕಾಮಗಾರಿ ಸ್ಥಳ ಮತ್ತು ಬಸ್‌ನಲ್ಲಿ ಯಾರೊಬ್ಬರೂ ಇರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.