ADVERTISEMENT

ಹುಬ್ಬಳ್ಳಿ: ಒಣಮೆಣಸಿನಕಾಯಿಗೆ ದಾಖಲೆಯ ಬೆಲೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 3:39 IST
Last Updated 20 ಡಿಸೆಂಬರ್ 2020, 3:39 IST
ಮೆಣಸಿನಕಾಯಿ
ಮೆಣಸಿನಕಾಯಿ   

ಹುಬ್ಬಳ್ಳಿ: ಇಲ್ಲಿನ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯ ಶನಿವಾರದ ಟೆಂಡರ್‌ನಲ್ಲಿಡಬ್ಬಿ ತಳಿಯ ಮೆಣಸಿನಕಾಯಿ ಕ್ವಿಂಟಲ್‍ಗೆ ₹38,100 ಬೆಲೆಗೆ ಮಾರಾಟವಾಗಿ ದಾಖಲೆ ಬರೆದಿದೆ.

‘ಟೆಂಡರ್‌ನಲ್ಲಿ ಸಿ.ಬಿ. ಶಿಗ್ಗಾವ್‌ ಅಂಡ್ ಸನ್ಸ್‌ ದಲ್ಲಾಳಿ ಅಂಗಡಿ ಮಾರಾಟಕ್ಕೆ ಬಂದಿದ್ದ ಬೂದಿಹಾಳ ರೈತ ವಸಂತಗೌಡ ಪಾಟೀಲ ಅವರ ಡಬ್ಬಿ ಒಣಮೆಣಸಿನಕಾಯಿಯನ್ನು ₹38,100 ಬೆಲೆಗೆ ಎ.ಆರ್. ನದಾಫ್ ಖರೀದಿಸಿದ್ದಾರೆ. ಎಪಿಎಂಸಿಕಾಯ್ದೆ ತಿದ್ದುಪಡಿ ಗದ್ದಲ, ಸೆಸ್‌ ಮರುನಿಗದಿ ಹೀಗೆ ಹಲವಾರು ಸಮಸ್ಯೆಗಳಿದ್ದರೂ ಓಣ ಮೆಣಸಿನಕಾಯಿ ವಹಿವಾಟಿಗೆ ಯಾವುದೇ ತೊಂದರೆಯಾಗಿಲ್ಲ’ ಎಂದು ಇಲ್ಲಿನ ವ್ಯಾಪಾರಸ್ಥರ ಸಂಘದ ಗೌರವ ಕಾರ್ಯದರ್ಶಿ ಪ್ರಭುಲಿಂಗಪ್ಪ ಅಂಕಲಕೋಟಿ ತಿಳಿಸಿದ್ದಾರೆ.

ಎರಡು ದಿನಗಳ ಹಿಂದೆ ಬ್ಯಾಡಗಿ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ ಬ್ಯಾಡಗಿ ಡಬ್ಬಿ ಮೆಣಸಿನಕಾಯಿಗೆ ₹36,999 ಹಾಗೂ ಕಡ್ಡಿ ಮೆಣಸಿನಕಾಯಿಗೆ ₹32,009 ಬೆಲೆ ದೊರೆತಿತ್ತು. ಇದಕ್ಕೂ ಮೀರಿದ ಬೆಲೆ ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಲಭಿಸಿದೆ. ಇಲ್ಲಿನ ಎಪಿಎಂಸಿಯಲ್ಲಿ ಪ್ರತಿಸೋಮವಾರ, ಗುರುವಾರ ಮತ್ತು ಶನಿವಾರ ಒಣಮೆಣಸಿನಕಾಯಿ ಆವಕ ನಡೆಯುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.