ಕುಂದಗೋಳ: ಪಟ್ಟಣದ ಗ್ರಾಮದೇವತೆ ದ್ಯಾಮವ್ವದೇವಿ ದೇವಸ್ಥಾನಕ್ಕೆ ದ್ವಾರಬಾಗಿಲು ನಿರ್ಮಾಣ ಮಾಡಿಕೊಡುವಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶ್ಯಾಮಸುಂದರ ದೇಸಾಯಿ ಅವರಿಗೆ ದೇವಸ್ಥಾನ ಸೇವಾ ಸಮಿತಿಯವರು ಬುಧವಾರ ಮನವಿ ಸಲ್ಲಿಸಿದರು.
ದೇವಸ್ಥಾನವು ಪುರಾತನವಾಗಿದ್ದು, ನಿತ್ಯ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಬಹುದಿನಗಳ ಬೇಡಿಕೆಯಾದ ದ್ವಾರ ಬಾಗಿಲನ್ನು ನಿರ್ಮಿಸಿ ಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಉಪಾಧ್ಯಕ್ಷ ಮಂಜುನಾಥ ಹಿರೇಮಠ, ಸದಸ್ಯ ಪ್ರವೀಣ ಬಡ್ನಿ, ಮುಖ್ಯಾಧಿಕಾರಿ ಸಿ.ವಿ.ಕುಲಕರ್ಣಿ ಹಾಗೂ ಶಂಕ್ರಣ್ಣ ಗೌರಿ, ಬಸವರಾಜ ಗಂಗಾಯಿ, ಬಸವರಾಜ ಅಲ್ಲಾಫೂರ, ಪ್ರವೀಣ ಗಂಗಾಯಿ, ಈಶ್ವರಪ್ಪ ಅರ್ಕಸಾಲಿ ಹಾಗೂ ದೇವಸ್ಥಾನದ ಸೇವಾ ಸಮಿತಿಯ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.