ಕಲಘಟಗಿ: ಪಟ್ಟಣದ ಎಪಿಎಂಸಿಯಿಂದ ಹುಬ್ಬಳ್ಳಿಯ ಕಸಾಯಿ ಖಾನೆಗೆ ಸಾಗಿಸುತ್ತಿದ್ದ 37 ಜಾನುವಾರುಗಳನ್ನು ಕಲಘಟಗಿ ಪಟ್ಟಣದ ಯುವಕರು ಹಾಗೂ ಪೊಲೀಸರು ರಕ್ಷಿಸಿದ್ದಾರೆ.
ಮಂಗಳವಾರ ತಡರಾತ್ರಿ 70ಕ್ಕೂ ಅಧಿಕ ಜಾನುವಾರುಗಳನ್ನು ಸ್ಥಳೀಯ ಎಪಿಎಎಂಸಿ ಗೋದಾಮಿನಲ್ಲಿ ಕೂಡಿ ಹಾಕಿದ್ದರು. ಅವುಗಳಲ್ಲಿ 11 ಜಾನುವಾರುಗಳನ್ನು ಹುಬ್ಬಳ್ಳಿ ಮೂಲದ ವ್ಯಕ್ತಿಯೊಬ್ಬರು ಟಾಟಾ ಎಸ್ ವಾಹನದಲ್ಲಿ ತುಂಬಿಕೊಂಡು ಹುಬ್ಬಳ್ಳಿಯ ಕಸಾಯಿ ಖಾನೆಗೆ ಸಾಗಿಸುತ್ತಿದ್ದ ವೇಳೆ ಕಲಘಟಗಿ ಪಟ್ಟಣದ ಯುವಕರು ವಾಹನ ತಡೆದು ಜಾನುವಾರುಗಳನ್ನು ರಕ್ಷಿಸಿದ್ದಾರೆ.
ಠಾಣೆಯ ಸಿಪಿಐ ಶ್ರೀಶೈಲ್ ಕೌಜಲಗಿ ಹಾಗೂ ಪೊಲೀಸರ ತಂಡವು 37 ಜಾನುವಾರುಗಳನ್ನು ರಕ್ಷಣೆ ಮಾಡಿದೆ.
ಪರಶುರಾಮ ಹುಲಿಹೊಂಡ, ವಿಜಯ ಮುರಾರಿ, ನವೀನ ತಹಸೀಲ್ದಾರ,ಹರೀಶ ಗುಡಿಹಾಳ,ರಾಘವೇಂದ್ರ ಹುಲಿಹೊಂಡ, ಗಣೇಶ್ ತಹಶೀಲ್ದಾರ್, ಸಂತೋಷ್ ವಾಗ್ಮೋಡೆ, ಶ್ರೀಧರ ತಹಶೀಲ್ದಾರ್, ಪ್ರಕಾಶ ಹುಲಿಹೊಂಡ, ದೇವರಾಜ ತಹಶೀಲ್ದಾರ್, ದೀಪಕ ಚವ್ಹಾಣ, ವತನ ಕಾಂಬಳೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.