
ಕುಂದಗೋಳ ಪಟ್ಟಣದಲ್ಲಿ ತಾಲ್ಲೂಕು ಲಿಂಗಾಯತ ಪಂಚಮಸಾಲಿ ಮಹಾಸಭಾ ಆಶ್ರಯದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮ ಅವರ 201 ವಿಜಯೋತ್ಸವ ಹಾಗೂ ಸಮಾಜಕ್ಕೆ 2ಎ ಹೋರಾಟದ 8ನೇ ಹಂತದ ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ಕಾರ್ಯಕ್ರಮದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು
ಕುಂದಗೋಳ: ರೈತರ ಉದ್ದಾರ ಆಗಬೇಕಾದ್ರೆ ರಾಜ್ಯದ ಮುಖ್ಯಮಂತ್ರಿಗೆ ಬದ್ದತೆ ಇರಬೇಕು. ಪಂಚಮಸಾಲಿ ಸಮಾಜ ಎಲ್ಲರೊಂದಿಗೆ ಬಾಂಧ್ಯವ್ಯದೊಂದಿಗೆ ಬಾಳುವಂತವರು ಎಂದು ಬಿಜಾಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಪಟ್ಟಣದ ಹರಭಟ್ಟ ಹೈಸ್ಕೂಲ್ ಮೈದಾನದಲ್ಲಿ ತಾಲ್ಲೂಕು ಲಿಂಗಾಯತ ಪಂಚಮಸಾಲಿ ಮಹಾಸಭಾ ಆಶ್ರಯದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮ 201 ವಿಜಯೋತ್ಸವ ಹಾಗೂ ಸಮಾಜಕ್ಕೆ 2ಎ ಹೋರಾಟದ 8ನೇ ಹಂತದ ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಶಾಸಕ ಎಂ.ಆರ್.ಪಾಟೀಲ ಮಾತನಾಡಿ, ಬಸವಜಯಮೃತ್ಯುಂಜಯ ಸ್ವಾಮೀಜಿ ಮಠವನ್ನು ಬಿಟ್ಟು ಸಮಾಜಕ್ಕಾಗಿ ಪಾದಯಾತ್ರೆ ಮಾಡಿದರು. ಅದಕ್ಕೆ ಹೆಗಲು ಕೊಟ್ಟವರು ಯತ್ನಾಳ ಅವರು. ಈ ಕಾರ್ಯಕ್ಕೆ ನಾನು ಸದಾ ಹೆಗಲು ಕೊಡುತ್ತೇವೆ ಎಂದರು.
ಪಂಚಮಸಾಲಿ ಸ್ವಾಮೀಜಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ನಾವು ಸರ್ಕಾರಕ್ಕೆ ಜಾಗ, ಅಧಿಕಾರ, ನಿಗಮ ಮಂಡಳಿ ಕೇಳುತ್ತಿಲ್ಲ. ನ್ಯಾಯಯುತ ಮೀಸಲಾತಿ ಕೇಳುತ್ತಿದ್ದೇವೆ ಎಂದರು.
ವೇದಿಕೆಯಲ್ಲಿ ರಾಣಿಚನ್ನಮ್ಮ ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಪಾರ್ಚನೆ ಮಾಡಲಾಯಿತು. ಇದಕ್ಕೂ ಮುನ್ನಾ ಶೇರೆವಾಡ ಗ್ರಾಮದ ಟೋಲ್ ಗೇಟ್ ಬಳಿ ಸಮಾವೇಶಗೊಂಡ ಸಮಾಜದವರು ಪಂಚಮಸಾಲಿ ಸ್ವಾಮೀಜಿ ಹಾಗೂ ಬಸನಗೌಡ ಪಾಟೀಲ ಯತ್ನಾಳ ಬರಮಾಡಿಕೊಂಡು ಬೈಕ್ ರ‍್ಯಾಲಿ ನಡೆಸಿದರು.
ಪಟ್ಟಣದ ಪಂಚಗ್ರಹ ಹಿರೇಮಠದ ಶಿತಿಕಂಠೇಶ್ವರ ಶಿವಾಚಾರ್ಯ ಸ್ವಾಮಿಜಿ, ಕಲ್ಯಾಣಪುರ ಮಠದ ಬಸವಣ್ಣಜ್ಜನವರು ಸಾನಿಧ್ಯ ವಹಿಸಿದ್ದರು.
ಮಾಜಿ ಶಾಸಕರಾದ ಎಸ್.ಐ. ಚಿಕ್ಕನಗೌಡ್ರ, ಎಂ.ಎಸ್.ಅಕ್ಕಿ, ತಾಲ್ಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ನಾಗರಾಜ ದೇಶಪಾಂಡೆ, ಹುಬ್ಬಳ್ಳಿ ಧಾರವಾಡ ಮಹಾನಗರ ಮಹಾಪೌರ ಜ್ಯೋತಿ ಪಾಟೀಲ, ಸಹಕಾರಿ ಧುರೀಣ ಅರವಿಂದ ಕಟಗಿ, ಧಾರವಾಡ ಕೆಸಿಸಿ ಬ್ಯಾಂಕಿನ ಉಪಾಧ್ಯಕ್ಷ ನಿಂಗನಗೌಡ ಮರಿಗೌಡ್ರು, ಕೆಸಿಸಿ ಬ್ಯಾಂಕ್ ನಿರ್ದೇಶಕ ಉಮೇಶ ಹೆಬಸೂರ, ಗೌಡಪ್ಪಗೌಡ ಪಾಟೀಲ, ಸೋಮರಾಯ ದೇಸಾಯಿ ಸಿದ್ದಣ್ಣ ಇಂಗಹಳ್ಳಿ, ಲಕ್ಷ್ಮಣ ಚುಳುಕಿ, ಪ್ರಭುಗೌಡ ಸಂಕಾಗೌಡಶ್ಯಾನಿ, ಸೋಮರಾಯ ದೇಸಾಯಿ, ಬಸವರಾಜ ನಾವಳ್ಳಿ, ಚೆನ್ನಪ್ಪ ಮಲ್ಲಾಪುರ,ಶೇಖಣ್ಣ ಬಾಳಿಕಾಯಿ, ಬಸವರಾಜ ಶಿರಸಂಗಿ, ಅಪ್ಪಣ್ಣ ಹುಂಡೆಕಾರ, ಸತೀಶ ಪಾಟೀಲ ಸೇರಿದಂತೆ ಅನೇಕರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.