ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಕೆಆರ್‌ಇಡಿಎಲ್, ಬಿಇಇ– ಜ್ಞಾನ ಪಾಲುದಾರ ಡಿ2ಒ ಸಹಯೋಗದಲ್ಲಿ ನಗರದ ಗೋಕುಲ ರಸ್ತೆಯ ಹೋಟೆಲ್‌ನಲ್ಲಿ ಈಚೆಗೆ ಸ್ಟ್ಯಾಂಡರ್ಡ್ ಆ್ಯಂಡ್ ಲೇಬಲಿಂಗ್ ಕಾರ್ಯಕ್ರಮದಡಿಯಲ್ಲಿ ಚಿಲ್ಲರೆ ವ್ಯಾಪಾರಿ ತರಬೇತಿ (ಆರ್‌ಟಿಟಿ) ಕಾರ್ಯಕ್ರಮ ನಡೆಯಿತು.
ಬೆಳಗಾವಿಯ ಜಯದೀಪ್ ಲೆಂಗಡಿ ಅವರು, ಕಡ್ಡಾಯ ಮತ್ತು ಸ್ವಯಂ ಪ್ರೇರಿತ ಉಪಕರಣಗಳನ್ನು ಒಳಗೊಂಡ ಸ್ಟಾರ್–ರೇಟೆಡ್ ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಮೂಲಕ ಇಂಧನ ಸಂರಕ್ಷಣೆ ಕುರಿತು ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಎಸ್.ಪಿ.ಸಂಶಿಮಠ ಮಾತನಾಡಿದರು. ಗೌರವ ಕಾರ್ಯದರ್ಶಿ ರವೀಂದ್ರ ಎಸ್.ಬಳಿಗಾರ, ಕೆಆರ್‌ಇಡಿಎಲ್ ಅಧಿಕಾರಿಗಳು ಹಾಗೂ ಹುಬ್ಬಳ್ಳಿ– ಧಾರವಾಡ ನಗರದ 50ಕ್ಕೂ ಹೆಚ್ಚು ಚಿಲ್ಲರೆ ವ್ಯಾಪಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.