ADVERTISEMENT

ಹುಬ್ಬಳ್ಳಿ: ‘ರಿಕಾನ್’ ಮಾಹಿತಿ ಪತ್ರಿಕೆ ಬಿಡುಗಡೆ

ಡಿಸೆಂಬರ್ 19ರಿಂದ 21ರವರೆಗೆ ಡೆವಲಪರ್ಸ್, ಕಟ್ಟಡ ಸಾಮಗ್ರಿಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 5:45 IST
Last Updated 21 ಸೆಪ್ಟೆಂಬರ್ 2025, 5:45 IST
ಹುಬ್ಬಳ್ಳಿಯಲ್ಲಿ ‘ರಿಕಾನ್ 2025’ ಕಾರ್ಯಕ್ರಮದ ಮಾಹಿತಿ ಪತ್ರಿಕೆ ಬಿಡುಗಡೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು
ಹುಬ್ಬಳ್ಳಿಯಲ್ಲಿ ‘ರಿಕಾನ್ 2025’ ಕಾರ್ಯಕ್ರಮದ ಮಾಹಿತಿ ಪತ್ರಿಕೆ ಬಿಡುಗಡೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು   

ಹುಬ್ಬಳ್ಳಿ: ಕ್ರೆಡಾಯಿ (ಕಾನ್‌ಫೆಡರೇಷನ್ ಆಫ್ ರಿಯಲ್ ಎಸ್ಟೇಟ್ ಅಸೋಸಿಯೇಷನ್ ಆಫ್ ಇಂಡಿಯಾ) ಹು–ಧಾ ಶಾಖೆಯಿಂದ ಆಯೋಜಿಸಿರುವ ‘ರಿಕಾನ್ 2025’ ಕಾರ್ಯಕ್ರಮದ ಮಾಹಿತಿ ಪತ್ರಿಕೆಯನ್ನು ಗಣ್ಯರು ಈಚೆಗೆ ಬಿಡುಗಡೆ ಮಾಡಿದರು.

ಕ್ರೆಡಾಯಿ ಹು–ಧಾ ಶಾಖೆಯ ಅಧ್ಯಕ್ಷ ಗುರುರಾಜ ಅಣ್ಣಿಗೇರಿ ಮಾತನಾಡಿ, ‘ಉತ್ತರ ಕರ್ನಾಟಕದ ಡೆವಲಪರ್ಸ್ ಮತ್ತು ವಿನೂತನ ಕಟ್ಟಡ ಸಾಮಗ್ರಿಗಳ ಬೃಹತ್ ಪ್ರದರ್ಶನವನ್ನು ಗೋಕುಲ ರಸ್ತೆಯ ದೇಶಪಾಂಡೆ ಫೌಂಡೇಷನ್ ಎದುರಿನ ಜಾಗದಲ್ಲಿ ಡಿಸೆಂಬರ್ 19ರಿಂದ 21ರವರೆಗೆ ಆಯೋಜಿಸಲಾಗಿದೆ. ಬೆಂಗಳೂರು, ಮೈಸೂರು, ಮಂಗಳೂರು ಮೊದಲಾದ ಕಡೆಯಿಂದಲೂ ಉದ್ಯಮಿಗಳು ಪಾಲ್ಗೊಳ್ಳಲಿದ್ದು, ಬೇರೆ ನಗರಗಳಲ್ಲಿ ನಿವೇಶನ ಖರೀದಿಸುವುದಿದ್ದರೆ ಇಲ್ಲಿಯೇ ಬುಕ್ ಮಾಡಬಹುದು’ ಎಂದು ತಿಳಿಸಿದರು. 

‘ಶಾಖೆಯಿಂದ ಅವಳಿ ನಗರದಲ್ಲಿ 25 ಸಾವಿರ ಸಸಿ ನೆಡುವ ಯೋಜನೆ ರೂಪಿಸಲಾಗಿದೆ. ಪ್ರತಿ ಸಸಿಗೆ ₹500 ಶುಲ್ಕವಿದ್ದು, ಪ್ರತಿ ಸದಸ್ಯ 100 ಸಸಿಗಳ ಪ್ರಾಯೋಜಕತ್ವ ವಹಿಸಲಿದ್ದಾರೆ. ನೆಟ್ಟ ಸಸಿಗಳನ್ನು ಎರಡು ವರ್ಷಗಳವರೆಗೆ ನಿರ್ವಹಣೆ ಮಾಡಲು ಏಜೆನ್ಸಿಗೆ ವಹಿಸಲಾಗಿದೆ. ಶಾಖೆಯ ಸ್ವಂತ ಕಚೇರಿ ನಿರ್ಮಿಸುವ ಗುರಿಯೂ ಇದೆ’ ಎಂದು ವಿವರಿಸಿದರು.

ADVERTISEMENT

‘ಕೋಟಿ ಸ್ಟೀಲ್ ಕಂಪನಿ ಉತ್ಪಾದಿಸಿ, ಮಾರಾಟ ಮಾಡುವ ಪ್ರತಿ ಟನ್ ಸ್ಟೀಲ್‌ನಿಂದ ಬರುವ ಆದಾಯದಲ್ಲಿ ಒಂದು ಸಸಿ ನೆಡುವ ಹಾಗೂ ಅಗತ್ಯವಿದ್ದವರಿಗೆ ಒಂದು ಊಟ ನೀಡುವ ಯೋಜನೆ ಆರಂಭಿಸಿದ್ದೇವೆ. ಅವಳಿ ನಗರದಲ್ಲಿ 50 ಸಾವಿರ ಸಸಿ ನೆಡಬೇಕು. ಇದಕ್ಕೆ ಅಗತ್ಯ ಸಹಕಾರ ನೀಡಲಾಗುತ್ತದೆ’ ಕಂಪನಿಯ ಮಾರುಕಟ್ಟೆ ವಿಭಾಗದ ನಿರ್ದೇಶಕ ರಾಹುಲ್ ಕೋಟಿ ಭರವಸೆ ನೀಡಿದರು. ಹೇಳಿದರು.

ಕಂಪನಿಯ ಉಪಾಧ್ಯಕ್ಷ ಬಳವಂತರಾವ್, ಕ್ರೆಡಾಯಿ ಕೋಶಾಧಿಕಾರಿ ಬ್ರಿಯಾನ್ ಡಿಸೋಜಾ ಮಾತನಾಡಿದರು.

ಸಹಕಾರ್ಯದರ್ಶಿ ಅರ್ಬಾಜ್ ಸಂಸಿ, ಕಾರ್ಯದರ್ಶಿ ಸತೀಶ ಮುನವಳ್ಳಿ, ಇಮ್ತಿಯಾಜ ಸಂಸಿ, ಅಮೃತ ಮೆಹರವಾಡೆ, ಪ್ರದೀಪ್ ರಾಯ್ಕರ್, ಸಂಜಯ ಕೊಠಾರಿ, ಇಸ್ಮಾಯಿಲ್ ಸಂಸಿ, ಕಾಶೀನಾಥ ಚಟ್ನಿ, ಸಾಜಿದ್ ಫರಾಶ್, ಶಿವಣ್ಣ ಪಾಟೀಲ, ಸೂರಜ ಅಳವಂಡಿ, ಶ್ರೀಪಾದ ಶೇಜವಾಡಕರ, ಆಕಾಶ ಹಬೀಬ್ ಇದ್ದರು.

ವೇಗವಾಗಿ ಬೆಳೆಯುತ್ತಿರುವ ಅವಳಿ ನಗರದಲ್ಲಿ ಸ್ವಂತ ಮನೆ ಕಟ್ಟಿಸುವ ಕನಸು ನನಸಾಗಲು ಈ ಕಾರ್ಯಕ್ರಮ ನೆರವಾಗಲಿದೆ. ಬಂಡವಾಳ ಹೂಡಿಕೆದಾರರ ಆಕರ್ಷಿಸಲೂ ಸಹಕಾರಿಯಾಗಿದೆ
ವಿ.ಎಸ್‌.ವಿ. ಪ್ರಸಾದ ಉದ್ಯಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.