
ಅಳ್ನಾವರ: ‘ಸಂಸ್ಕೃತ ಸರಳ ಹಾಗೂ ಸುಂದರ ಭಾಷೆ. ಈ ಭಾಷೆಯಲ್ಲಿ ನಮ್ಮ ಸಂಸ್ಕೃತಿಯ ಸೊಗಡು ಅಡಗಿದೆ’ ಎಂದು ಸಂಸ್ಕೃತ ಭಾರತೀ ಸಂಸ್ಥೆಯ ಸಂಚಾಲಕಿ ಪೂರ್ಣಿಮಾ ಮುತ್ನಾಳ ಹೇಳಿದರು.
ಸಂಸ್ಥೆ ವತಿಯಿಂದ ಇಲ್ಲಿನ ಇಂದಿರಾ ನಗರ ಬಡಾವಣೆಯ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ನಡೆದ ಗೀತಾ ಜಯಂತಿ ಆಚರಣೆ ಮತ್ತು ಸಮರ್ಪಣಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ಈ ಭಾಗದ ಜನರಿಗೆ ಉಚಿತವಾಗಿ ಸಂಸ್ಕೃತ ಭಾಷೆಯ ತರಗತಿಗೆ ನೀಡಲಾಗುತ್ತಿದ್ದು, ಎಲ್ಲರೂ ಭಾಗವಹಿಸಬೇಕು’ ಎಂದರು.
ಭಗವದ್ಗೀತೆ ಪಾರಾಯಣ, ಭಕ್ತಿ ಗೀತೆ ಗಾಯನ ನಡೆಯಿತು.
ದೇವಸ್ಥಾನ ಟ್ರಸ್ಟ್ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಮಹಾದೇವ ಸಾಗರೇಕರ, ಮಹೇಶ ಮುತ್ನಾಳ, ಎಸ್.ಡಿ. ದೇಗಾವಿಮಠ, ಜಯಶ್ರೀ ಸೊಪ್ಪಿ,
ಪುಂಡಲಿಕ ಪಾರ್ದಿ, ಎಲ್ಲಪ್ಪ ತೇರಗಾಂವಕರ, ನಾರಾಯಣ ಪಟೇಲ, ರಾಜೇಶ್ವರಿ ಹಿರೇಮಠ, ರಾಣಿ ಹಸಬಿಮಠ, ಉಮೇಶ ದೊಡ್ಡಮನಿ, ರಾಜು ಬೆಂಡಿಗೇರಿ, ತೃಪ್ತಿ ಬಡಿಗೇರ ಇದ್ದರು.
ಪಲ್ಲಕ್ಕಿ ಸೇವೆ: ವೀರಭದ್ರೇಶ್ವರ ದೇವಸ್ಥಾನದಲ್ಲಿ ಎಳ್ಳು ಅಮಾವಾಸ್ಯೆ ಪ್ರಯುಕ್ತ ಶುಕ್ರವಾರ ರಾತ್ರಿ ಪಲ್ಲಕ್ಕಿ ಸೇವೆ ನಡೆಯಿತು. ಬೆಳಿಗ್ಗೆ ಅಭಿಷೇಕ ಮುಂತಾದ ಧಾರ್ಮಿಕ ಕಾರ್ಯಗಳನ್ನು ಹಿರಿಯರಾದ ಎಂ.ಸಿ. ಹಿರೇಮಠ ಕುಟುಂಬ ವರ್ಗ ನೇರವೇರಿಸಿದರು. ಮಹಾ ಮಂಗಳಾರತಿ ನಡೆಯಿತು. ರಾತ್ರಿ ಮಹಾ ಪ್ರಸಾದ ವ್ಯವಸ್ಥೆ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.