
ಉಪ್ಪಿನಬೆಟಗೇರಿ: ’ವಿಜ್ಞಾನ ಸದ್ಬಳಕೆಯಿಂದ ರಾಷ್ಟ್ರದ ಉನ್ನತಿ ಸಾಧ್ಯ’ ಎಂದು ಕರ್ನಾಟಕ ವಿಶ್ವ ವಿದ್ಯಾಲಯ ಕುಲಪತಿ ಡಾ. ಎ. ಎಂ. ಖಾನ್ ಹೇಳಿದರು.
ಧಾರವಾಡ ತಾಲ್ಲೂಕಿನ ಅಮ್ಮಿನಬಾವಿ ಗ್ರಾಮದ ಶಾಂತೇಶ್ವರ ಪ್ರೌಢ ಶಾಲೆಯಲ್ಲಿ ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಬೆಂಗಳೂರಿನ ಕರ್ನಾಟಕ ವಿಜ್ಞಾನ ಹಾಗೂ ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಮತ್ತು ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಭೌತ ವಿಜ್ಞಾನಿ ಡಾ.ಎಂ.ಐ. ಸವದತ್ತಿ ಅವರ ಸ್ಮರಣಾರ್ಥ ವಿಶ್ವ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ರಾಂತ ಕುಲಪತಿ ಬಿ.ಜಿ. ಮೂಲಿಮನಿ ಮಾತನಾಡಿ, ವಿಜ್ಞಾನ ಹಾಗೂ ತಂತ್ರಜ್ಞಾನಗಳ ಅರಿವು ವಿದ್ಯಾರ್ಥಿಗಳಲ್ಲಿ ವೈಚಾರಿಕ ಮನೋಭೂಮಿಕೆ ಹುಟ್ಟುಹಾಕಲು ಪೂರಕವಾಗಿವೆ ಎಂದರು.
ವಕೀಲ ಸುನೀಲ ಗುಡಿ ಮಾತನಾಡಿದರು.
ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ವೀರಣ್ಣ ಬೋಳಿಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಮ್ಮಿನಬಾವಿ ಗ್ರುಪ್ ಎಜ್ಯುಕೇಷನಲ್ ಸಂಸ್ಥೆಯ ಪದಾಧಿಕಾರಿಗಳಾದ ಎಂ.ವ್ಹಿ. ಹೊಸೂರ, ಮಾಳಪ್ಪ ಅಮರಶೆಟ್ಟಿ, ಪಿ.ಎನ್. ಕುಸೂಗಲ್ಲ, ಎಂ.ಸಿ. ಹುಲ್ಲೂರ, ಬಿ.ಎನ್. ನವಲಗುಂದ, ಜಿ.ಎಂ. ಹಂಚಿನಾಳ, ಮುಖ್ಯಾಧ್ಯಾಪಕ ಎಂ.ವ್ಹಿ. ಅಂಗಡಿ ಸ್ವಾಗತಿಸಿದರು. ಲಲಿತಾ ಮಾದರ ನಿರೂಪಿಸಿದರು. ಎನ್. ಬಿ. ಅಮರಗೋಳ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.