ADVERTISEMENT

ಕೃಷಿ ಭೂಮಿಯ ಫಲವತ್ತತೆ ಅನುಗುಣವಾಗಿ ಬಿತ್ತನೆ ಮಾಡಿ: ವಿಜ್ಞಾನಿ ಬಿ.ಎಸ್.ಏಣಗಿ ಸಲಹೆ

ರೈತರಿಗೆ ಬೇಸಾಯಶಾಸ್ತ್ರ ವಿಜ್ಞಾನಿ ಬಿ.ಎಸ್.ಏಣಗಿ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 5:15 IST
Last Updated 15 ಆಗಸ್ಟ್ 2025, 5:15 IST
ಉಪ್ಪಿನಬೆಟಗೇರಿಯ ರೈತ ಮಲ್ಲಿಕಾರ್ಜುನ ಮಸೂತಿ ಅವರ ಹೊಲದಲ್ಲಿ ಗುರುವಾರ ಏರ್ಪಡಿಸಿದ್ದ ಹೆಸರು ಬೆಳೆ ಕ್ಷೇತ್ರೋತ್ಸವದಲ್ಲಿ ಬೇಸಾಯಶಾಸ್ತ್ರ ವಿಜ್ಞಾನಿ ಬಿ.ಎಸ್.ಏಣಗಿ ಮಾತನಾಡಿದರು
ಉಪ್ಪಿನಬೆಟಗೇರಿಯ ರೈತ ಮಲ್ಲಿಕಾರ್ಜುನ ಮಸೂತಿ ಅವರ ಹೊಲದಲ್ಲಿ ಗುರುವಾರ ಏರ್ಪಡಿಸಿದ್ದ ಹೆಸರು ಬೆಳೆ ಕ್ಷೇತ್ರೋತ್ಸವದಲ್ಲಿ ಬೇಸಾಯಶಾಸ್ತ್ರ ವಿಜ್ಞಾನಿ ಬಿ.ಎಸ್.ಏಣಗಿ ಮಾತನಾಡಿದರು   

ಉಪ್ಪಿನಬೆಟಗೇರಿ: ‘ಕೃಷಿಭೂಮಿಯ ಫಲವತ್ತತೆ ಅನುಗುಣವಾಗಿ ಬಿತ್ತನೆ ಮಾಡಿದಾಗ ಮಾತ್ರ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ’ ಎಂದು ಕೃಷಿ ವಿಶ್ವವಿದ್ಯಾಲಯದ ಬೇಸಾಯಶಾಸ್ತ್ರ ವಿಭಾಗದ ವಿಜ್ಞಾನಿ ಬಿ.ಎಸ್.ಏಣಗಿ ಹೇಳಿದರು.

ರಾಷ್ಟ್ರೀಯ ಆಹಾರ ಭದ್ರತೆ ಮತ್ತು ಪೌಷ್ಟಿಕ ಅಭಿಯಾನ ಅಂಗವಾಗಿ ಉಪ್ಪಿನಬೆಟಗೇರಿ ಗ್ರಾಮದ ರೈತ ಮಲ್ಲಿಕಾರ್ಜುನ ಮಸೂತಿ ಅವರ ಹೊಲದಲ್ಲಿ ಅಮ್ಮಿನಬಾವಿ ರೈತ ಸಂಪರ್ಕ ಕೇಂದ್ರದಿಂದ ಗುರುವಾರ ಏರ್ಪಡಿಸಿದ್ದ ಹೆಸರು ಬೆಳೆ ಕ್ಷೇತ್ರೋತ್ಸವ ಹಾಗೂ ಆತ್ಮ ಯೋಜನೆಯಡಿ ರೈತರಿಗೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತದ ರೈತ ಉತ್ತಮ ಉತ್ಪಾದಕ ಆದರೆ ಆತ ಉತ್ತಮ ಮಾರಾಟಗಾರ ಆಗುತ್ತಿಲ್ಲ. ಸಾವಯವ ಮತ್ತು ರಾಸಾಯನಿಕ ಗೊಬ್ಬರ ಭೂಮಿಗೆ ಅವಶ್ಯಕ. ಸರ್ಕಾರವು ರೈತರಿಗೆ ಬೆಂಬಲ ಬೆಲೆ ಸೇರಿ ಅನೇಕ ಸೌಲಭ್ಯಗಳನ್ನು ನೀಡಿದೆ. ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಗ್ರಾಮ ಪಂಚಾಯಿತಿ ಅಧ್ಯಕ್ಷ ಬಶೀರ ಅಹ್ಮದ ಮಾಳಗಿಮನಿ, ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅನಗೌಡರ, ಅಮ್ಮಿನಬಾವಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರೇಖಾ ಬೆಳ್ಳಟ್ಟಿ, ಸಹಾಯಕ ಕೃಷಿ ಅಧಿಕಾರಿ ಎಚ್.ಎಂ.ಬದಾಮಿ, ಕೃಷಿಕ ಸಮಾಜದ ಉಪಾಧ್ಯಕ್ಷ ಕಲ್ಲಪ್ಪ ಹಟ್ಟಿ, ನಿಂಗಪ್ಪ ದಿವಟಗಿ, ಚಂದ್ರನಾಥ ಅಷ್ಟಗಿ, ಕಾಶಪ್ಪ ದೊಡವಾಡ, ಕೃಷ್ಣಾ ಬುದ್ನಿ, ಸವಿತಾ ತಡಕೋಡ ಹಾಗೂ ರೈತರು ಪಾಲ್ಗೊಂಡಿದ್ದರು.

ಚಿತ್ರಾವಳಿ: ಉಪ್ಪಿನಬೆಟಗೇರಿಯ ರೈತ ಮಲ್ಲಿಕಾರ್ಜುನ ಮಸೂತಿ ಅವರ ಹೊಲದಲ್ಲಿ ಅಮ್ಮಿನಬಾವಿ ರೈತ ಸಂಪರ್ಕ ಕೇಂದ್ರದ ವತಿಯಿಂದ ಗುರುವಾರ ಏರ್ಪಡಿಸಿದ್ದ ಹೆಸರು ಬೆಳೆ ಕ್ಷೇತ್ರೋತ್ಸವ ಹಾಗೂ ಆತ್ಮ ಯೋಜನೆಯಡಿ ರೈತರಿಗೆ ತರಬೇತಿ ಕಾರ್ಯಕ್ರಮದಲ್ಲಿ ಬಿ.ಎಸ್.ಏಣಗಿ ಮಾತನಾಡಿದರು.

‘ಕೀಟ ಹತೋಟಿಗೆ ತರಲು ಸಾಧ್ಯ’

ಧಾರವಾಡ ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರ ವಿಭಾಗದ ವಿಜ್ಞಾನಿ ಕಲಾವತಿ ಕಂಬಳಿ ಮಾತನಾಡಿ ಕೃಷಿಯಲ್ಲಿ ಬಹುಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು. ಇದರಿಂದ ಕೀಟ ಹತೋಟಿಗೆ ತರಲು ಸಾಧ್ಯವಾಗುತ್ತದೆ ಎಂದರು. ಪ್ರಸ್ತುತ ಮೋಡಕವಿದ ವಾತಾವರಣ ಮತ್ತು ತುಂತುರು ಮಳೆಗೆ ಕೀಟ ಮತ್ತು ಪತಂಗದ ಹುಳುಗಳು ಹೆಚ್ಚಳವಾಗಿವೆ. ಇವುಗಳ ನಿಯಂತ್ರಣಕ್ಕೆ ಕೀಟನಾಶಕ ಔಷಧಿ ಸಿಂಪಡಣೆ ಜತೆಗೆ ಹೊಲದಲ್ಲಿ ಮೋಹಕ ಬಲೆ ಹಾಕಬೇಕು. ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಹಾಗೂ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಬೇಕು ಎಂದು ತಿಳಿಸಿದರು. ಹಳದಿ ರೋಗ ಜೇಕು ಡೊಣ್ಣುಹುಳು ಸೇರಿದಂತೆ ಅನೇಕ ಸಮಸ್ಯೆಗಳ ಪರಿಹಾರದ ಕುರಿತು ರೈತರು ಕೃಷಿ ವಿಜ್ಞಾನಿಗಳಿಂದ ಮಾಹಿತಿ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.