ಧಾರವಾಡ: ಸತ್ತೂರಿನ ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್‌ನಲ್ಲಿ ಬೆಂಗಳೂರಿನ 79 ವರ್ಷದ ಹೃದ್ರೋಗಿ ಉದ್ಯಮಿಯೊಬ್ಬರಿಗೆ ‘ಮೈಕ್ರಾ ಲೀಡಲೆಸ್ ಪೇಸ್‌ಮೇಕರ್’ ಅನ್ನು ಯಶಸ್ವಿಯಾಗಿ ಅಳವಡಿಸಲಾಯಿತು.
ಅವರು ಎವಿ (ಎಟ್ರಿಯೊವೆಂಟ್ರಿಕ್ಯುಲರ್) ಬ್ಲಾಕ್‌ನಿಂದ ಅಸಹಜ ನಿಧಾನ ಹೃದಯ ಬಡಿತ ಕಾರಣದಿಂದ ಪದೇಪದೇ ಕುಸಿದು ಬೀಳುತ್ತಿದ್ದರು. ಈ ಚಿಕಿತ್ಸೆಯಿಂದ ಅವರು ಗುಣಮುಖರಾಗಿದ್ದಾರೆ.
’ಮೈಕ್ರಾ ಲೀಡ್‌ಲೆಸ್ ಪೇಸ್‌ಮೇಕರ್ (2 ವಿಟಮಿನ್ ಕ್ಯಾಪ್ಸೂಲ್ ಗಾತ್ರ) ಸಣ್ಣದಾಗಿದ್ದು, ಲೀಡ್‌ರಹಿತ ವಿಧಾನದಿಂದ ಅಳವಡಿಸಬಹುದಾಗಿದೆ. ಈ ಸಾಧನವನ್ನು ನಿಧಾನವಾದ ಹೃದಯ ಬಡಿತವನ್ನು ಮತ್ತೆ ಎಂದಿನ ವೇಗಕ್ಕೆ ತರಲು ಬಳಸಲಾಗುತ್ತದೆ. ಈ ಚಿಕಿತ್ಸೆಗೆ ಎದೆಯ ಭಾಗದಲ್ಲಿ ಅಥವಾ ಚರ್ಮ ಕತ್ತರಿಸುವ ಅಗತ್ಯ ಇಲ್ಲ. ತೊಡೆ ಭಾಗದಲ್ಲಿ ಒಂದು ಸಣ್ಣ ಚುಚ್ಚುವಿಕೆಯ ಮೂಲಕ, ಕ್ಯಾಥೆಟರ್ ಬಳಸಿಕೊಂಡು ಪೇಸ್ ಮೇಕರ್ ಹೃದಯದಲ್ಲಿ ಅಳವಡಿಸಲಾಗುತ್ತದೆ. 45 ನಿಮಿಷಗಳಲ್ಲಿ ಚಿಕಿತ್ಸೆ ನಡೆಸಿದ್ದೇವೆ. ಚಿಕಿತ್ಸೆಯ ಮರುದಿನವೇ ರೋಗಿಯನ್ನು ಆಸ್ಪತ್ರೆಯಿಂದ ಮನೆಗೆ ಕಳಿಸಲಾಗಿದೆ. ಅವರು ದೈನಂದಿನ ಚಟುವಟಿಕೆಗಳನ್ನು ಪುನರಾರಂಭಿಸಿದ್ದಾರೆ ಎಂದು ಹೃದ್ರೋಗ ತಜ್ಞ ಡಾ.ರಘು ಪ್ರಸಾದ್ ತಿಳಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.