ಪಂಡಿತ್ ಶ್ರೀನಿವಾಸ ಜೋಶಿ
ಹುಬ್ಬಳ್ಳಿ: ಸಿತಾರ್ ವಾದಕ ಪಂಡಿತ್ ಶ್ರೀನಿವಾಸ ಜೋಶಿ (75) ಇಲ್ಲಿನ ವೆಂಕಟೇಶ್ವರ ನಗರದಲ್ಲಿ ಬುಧವಾರ ನಿಧನರಾದರು.
ಅವರಿಗೆ ಪತ್ನಿ ರಾಧಾ, ಪುತ್ರ ನಿಖಿಲ್ ಮತ್ತು ಪುತ್ರಿ ಮೇಘಾ ಇದ್ದಾರೆ. ನಗರದ ಕೇಶ್ವಾಪುರದ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.
1951ರಲ್ಲಿ ಜನಿಸಿದ ಶ್ರೀನಿವಾಸ ಜೋಶಿ ಅವರಿಗೆ ಕಿರಿಯ ವಯಸ್ಸಿನಲ್ಲೇ ಸಂಗೀತದ ಬಗ್ಗೆ ಆಸಕ್ತಿ ಮೂಡಿತು. 1972ರಲ್ಲಿ ಸಿತಾರ್ ವಾದಕ ಉಸ್ತಾದ ಬಾಲೇಖಾನ್ ಅವರ ಬಳಿ ಸಿತಾರ್ ವಾದನ ಕಲಿತರು. ನಂತರದ ವರ್ಷಗಳಲ್ಲಿ ವಿವಿಧೆಡೆ ಸಿತಾರ ಕಾರ್ಯಕ್ರಮ ನಡೆಸಿಕೊಟ್ಟರು. 50ಕ್ಕೂ ಹೆಚ್ಚು ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.
ಕರ್ನಾಟಕ ವಿದ್ಯುತ್ ಪ್ರಸಾರಣಾ ನಿಗಮದಲ್ಲಿ ಹಿರಿಯ ಸಹಾಯಕರಾಗಿದ್ದ ಅವರು ಸ್ವಯಂ ನಿವೃತ್ತರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.