ADVERTISEMENT

ಹುಬ್ಬಳ್ಳಿ | ಕೌಶಲಾಧಾರಿತ ಶಿಕ್ಷಣ ಅವಶ್ಯ: ಡಾ.ಇ.ವಿ.ರಮಣರೆಡ್ಡಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 4:01 IST
Last Updated 8 ಫೆಬ್ರುವರಿ 2026, 4:01 IST
ಹುಬ್ಬಳ್ಳಿಯಲ್ಲಿ ದೇಶಪಾಂಡೆ ಫೌಂಡೇಶನ್‌ ವತಿಯಿಂದ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಸಂವಾದ ನಡೆಸಿದರು
ಹುಬ್ಬಳ್ಳಿಯಲ್ಲಿ ದೇಶಪಾಂಡೆ ಫೌಂಡೇಶನ್‌ ವತಿಯಿಂದ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಸಂವಾದ ನಡೆಸಿದರು   

ಹುಬ್ಬಳ್ಳಿ: ‘ಶಿಕ್ಷಣದಲ್ಲಿ ಅರ್ಥಪೂರ್ಣ ಬದಲಾವಣೆ ತರಲು ಸಮನ್ವಯ ನೀತಿ ಹಾಗೂ ಕೌಶಲಾಧಾರಿತ ಶಿಕ್ಷಣದ ತರಬೇತಿ ತುಂಬಾ ಅವಶ್ಯವಿದೆ’ ಎಂದು ಡಾ.ಇ.ವಿ.ರಮಣರೆಡ್ಡಿ ಹೇಳಿದರು.

ನಗರದಲ್ಲಿ ದೇಶಪಾಂಡೆ ಫೌಂಡೇಶನ್‌ ವತಿಯಿಂದ ಶುಕ್ರವಾರ ಆಯೋಜಿಸಿದ್ದ ‘ಅಭಿವೃದ್ಧಿ ಸಂವಾದ–2026, ದೇಶಪಾಂಡೆ ಡೈಲಾಗ್‌’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪದವಿ ಶಿಕ್ಷಣದ ಜೊತೆಗೆ ಕೌಶಲಾಧಾರಿತ ಶಿಕ್ಷಣದ ಅವಶ್ಯಕತೆ ಇದೆ. ಇದರಿಂದ ಶಿಕ್ಷಣ ಮತ್ತು ಉದ್ಯೋಗದ ನಡುವಿನ ಅಂತರ ಕಾಯ್ದುಕೊಳ್ಳಬಹುದು’ ಎಂದರು. 

ADVERTISEMENT

ರಾಜನ್‌ ಅವರು, ‘ಇಂಟರ್ನ್‌ಶಿಪ್‌ ಹಾಗೂ ಅಗತ್ಯ ತರಬೇತಿಯಿಂದ ಉದ್ಯೋಗಾವಕಾಶ ಪಡೆಯಬಹುದು. ಅದರಲ್ಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚು ಆದ್ಯತೆ ನೀಡಬೇಕಿದೆ’ ಎಂದರು. 

ಇದೇ ವೇಳೆ ಅವರು, ಶಿಕ್ಷಣ ವ್ಯವಸ್ಥೆ ಮತ್ತು ಉದ್ಯೋಗ ಮಾರುಕಟ್ಟೆಯ ಅಗತ್ಯಗಳ ಕುರಿತು ಮಾತನಾಡಿದರು. 

ಪ್ರೊ.ಸುಶಿಲ್ ವಾಚಾನಿ ಅವರು, ‘ಆಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ವಿಷಯ ಕುರಿತು ಮಾತನಾಡಿದರು. ಗುರುರಾಜ ದೇಶಪಾಂಡೆ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.