ADVERTISEMENT

ನೈರುತ್ಯ ರೈಲ್ವೆ: ಅನಂತ್‌ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 6:41 IST
Last Updated 16 ಅಕ್ಟೋಬರ್ 2025, 6:41 IST
ಪಿ.ಅನಂತ್
ಪಿ.ಅನಂತ್   

ಹುಬ್ಬಳ್ಳಿ: ನೈರುತ್ಯ ರೈಲ್ವೆಯ ನೂತನ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾಗಿ ಪಿ.ಅನಂತ್ ಅವರು ಈಚೆಗೆ ಅಧಿಕಾರ ವಹಿಸಿಕೊಂಡರು. ನವದೆಹಲಿಯ ರೈಲ್ವೆ ಮಂಡಳಿಯ ಹೆಚ್ಚುವರಿ ಸದಸ್ಯರಾಗಿ ವರ್ಗಾವಣೆಗೊಂಡಿರುವ ಎ.ಕೆ.ಜೈನ್ ಅವರ ಸ್ಥಾನಕ್ಕೆ ಅನಂತ್‌ ಅವರು ನಿಯೋಜನೆಗೊಂಡಿದ್ದಾರೆ. 

ಭಾರತೀಯ ರೈಲ್ವೆ ಮೆಕ್ಯಾನಿಕಲ್ ಎಂಜಿನಿಯರ್‌ಗಳ ಸೇವೆಯ 1989ನೇ ಸಾಲಿನ ಬ್ಯಾಚ್‌ನ ಅಧಿಕಾರಿಯಾಗಿರುವ ಅವರು, ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಭಾರತೀಯ ರೈಲ್ವೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ.

2002 ರಿಂದ 2008 ರವರೆಗೆ ರೈಲ್ವೆ ಮಂಡಳಿಯಲ್ಲಿ (ಮಾನವಶಕ್ತಿ ಯೋಜನೆ) ನಿರ್ದೇಶಕರಾದ್ದರು. 2012 ರಿಂದ 2017 ರವರೆಗೆ ಬನಾರಸ್ ಲೋಕೊಮೋಟಿವ್ ವರ್ಕ್ಸ್‌ನಲ್ಲಿ ಮುಖ್ಯ ಮೆಕ್ಯಾನಿಕಲ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ADVERTISEMENT

2017ರಿಂದ ನವದೆಹಲಿಯ ರೈಲ್ವೆ ಮಾಹಿತಿ ವ್ಯವಸ್ಥೆಗಳ ಕೇಂದ್ರದಲ್ಲಿ ಕೋಚ್ ನಿರ್ವಹಣಾ ವ್ಯವಸ್ಥೆಯ ಪ್ರಧಾನ ವ್ಯವಸ್ಥಾಪಕರಾಗಿದ್ದ ಅವರು,  ಮಿಷನ್‌-ಕ್ರಿಟಿಕಲ್ ಅಪ್ಲಿಕೇಷನ್ ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ಅನುಷ್ಠಾನ‌‌‌‌ದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2021ರಿಂದ 2023ರವರೆಗೆ ದಕ್ಷಿಣ ರೈಲ್ವೆಯ ಮಧುರೆ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.