ADVERTISEMENT

ಆರ್‌ಆರ್‌ಬಿ ಪರೀಕ್ಷೆಗೆ ವಿಶೇಷ ರೈಲು

​ಪ್ರಜಾವಾಣಿ ವಾರ್ತೆ
Published 6 ಮೇ 2022, 16:03 IST
Last Updated 6 ಮೇ 2022, 16:03 IST
ಅಳ್ನಾವರ ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ ಘಟಕ ಹಮ್ಮಿಕೊಂಡಿದ್ದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ನಿವೃತ್ತ ಶಿಕ್ಷಕ ವೈ.ಬಿ. ಶೀಲವಂತರಮಠ ಅವರನ್ನು ಸತ್ಕರಿಸಲಾಯಿತು
ಅಳ್ನಾವರ ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ ಘಟಕ ಹಮ್ಮಿಕೊಂಡಿದ್ದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ನಿವೃತ್ತ ಶಿಕ್ಷಕ ವೈ.ಬಿ. ಶೀಲವಂತರಮಠ ಅವರನ್ನು ಸತ್ಕರಿಸಲಾಯಿತು   

ಹುಬ್ಬಳ್ಳಿ: ರೈಲ್ವೆ ನೇಮಕಾತಿ ಮಂಡಳಿಯ (ಆರ್‌ಆರ್‌ಬಿ) ವಿವಿಧ ಪರೀಕ್ಷೆಗಳು ಮೇ 9 ಮತ್ತು 10ರಂದು ನಡೆಯುತ್ತಿರುವುದರಿಂದ, ಅಭ್ಯರ್ಥಿಗಳಿಗೆ ಅನುಕೂಲವಾಗಲೆಂದು ನೈರುತ್ಯ ರೈಲ್ವೆಯು ವಿವಿಧ ನಗರಗಳಿಗೆ ವಿಶೇಷ ರೈಲುಗಳ ಸಂಚಾರವ್ಯವಸ್ಥೆ ಮಾಡಿದೆ.

ಹುಬ್ಬಳ್ಳಿಯಿಂದ ಔರಂಗಾಬಾದ್‌ಗೆ ಮೇ 7ರಂದು ರಾತ್ರಿ 8.45ಕ್ಕೆ ಹೊರಡುವ ರೈಲು ಮರುದಿನ ಸಂಜೆ 6ಕ್ಕೆ ತಲುಪಲಿದೆ. ಅಲ್ಲಿಂದ 9ರಂದು ರಾತ್ರಿ 10ಕ್ಕೆ ಬಿಡುವ ರೈಲು ಮರು ದಿನ ರಾತ್ರಿ 7ಕ್ಕೆ ಹುಬ್ಬಳ್ಳಿಗೆ ಬರಲಿದೆ.

ಮಂಗಳೂರು ಸೆಂಟ್ರಲ್‌ನಿಂದ 7ರಂದು ರಾತ್ರಿ 11ಕ್ಕೆ ಬೆಳಗಾವಿಗೆ ಹೊರಡುವ ರೈಲು 9ರಂದು ಬೆಳಿಗ್ಗೆ 3 ಗಂಟೆಗೆ ತಲುಪಲಿದೆ. ಬೆಳಗಾವಿಯಿಂದ 9ರಂದು ರಾತ್ರಿ 10ಕ್ಕೆ ಹೊರಡುವ ರೈಲು ಮರು ದಿನ ರಾತ್ರಿ 10.50ಕ್ಕೆ ಮಂಗಳೂರು ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.