ADVERTISEMENT

ಹುಬ್ಬಳ್ಳಿ: ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2024, 15:33 IST
Last Updated 15 ಮಾರ್ಚ್ 2024, 15:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಹುಬ್ಬಳ್ಳಿ: ಹೋಳಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ಇರುವ ಕಾರಣ ಇಲ್ಲಿನ ಎಸ್ಎಸ್ಎಸ್ ರೈಲು ನಿಲ್ದಾಣದಿಂದ ಅಹಮದಾಬಾದ್ ನಿಲ್ದಾಣದ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ (07311/ 07312) ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮಾರ್ಚ್ 24ರಂದು 07311 ಸಂಖ್ಯೆಯ ರೈಲು ಹುಬ್ಬಳ್ಳಿ ನಿಲ್ದಾಣದಿಂದ ಸಂಜೆ 7.30ಕ್ಕೆ ಹೊರಟು, ಮರುದಿನ ಸಂಜೆ 7.20ಕ್ಕೆ ಅಹಮದಾಬಾದ್ ನಿಲ್ದಾಣ ತಲುಪಲಿದೆ.

ಮಾರ್ಚ್ 25ರಂದು 07312 ಸಂಖ್ಯೆಯ ರೈಲು ಅಹಮದಾಬಾದ್ ನಿಲ್ದಾಣದಿಂದ ರಾತ್ರಿ 9.25ಕ್ಕೆಹೊರಟು, ಮರುದಿನ ಸಂಜೆ 7.45ಕ್ಕೆ ಹುಬ್ಬಳ್ಳಿ ನಿಲ್ದಾಣಕ್ಕೆ ಬರಲಿದೆ.

ADVERTISEMENT

ಧಾರವಾಡ, ಲೋಂಡಾ, ಬೆಳಗಾವಿ, ಘಟಪ್ರಭಾ, ಮೀರಜ್, ಸಾಂಗ್ಲಿ, ಸತಾರಾ, ಪುಣೆ, ಲೋನಾವಾಲ, ಕಲ್ಯಾಣ್, ವಸಾಯಿ ರೋಡ್, ಬೋಯಿಸರ್, ವಾಪಿ, ಸೂರತ್, ವಡೋದರಾ ಮತ್ತು ಆನಂದ ನಿಲ್ದಾಣಗಳ ಮೂಲಕ ರೈಲುಗಳು ಸಂಚರಿಸಲಿವೆ.

ಎಸಿ-ಟು ಟೈಯರ್ (1), ಎಸಿ-ತ್ರಿ ಟೈಯರ್ (2), ಸ್ಲೀಪರ್ ಕ್ಲಾಸ್ (8), ಸಾಮಾನ್ಯ ದ್ವಿತೀಯ ದರ್ಜೆ (5) ಮತ್ತು ಎಸ್ಎಲ್ಆರ್ ಡಿ (2) ಸೇರಿದಂತೆ ಒಟ್ಟು 19 ಬೋಗಿಗಳನ್ನು ಒಳಗೊಂಡಿರುತ್ತವೆ.

ಹೆಚ್ಚಿನ ಮಾಹಿತಿಗೆ, ಭಾರತೀಯ ರೈಲ್ವೆ ವೆಬ್‌ಸೈಟ್ https://enquiry.indianrail.gov.in ಗೆ ಭೇಟಿ ನೀಡಬಹುದು ಅಥವಾ 139 ಸಂಖ್ಯೆಗೆ ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

ಸಂತ್ರಾಗಾಚಿಗೆ ವಿಶೇಷ ರೈಲು:  ಮಾರ್ಚ್ 27ರಂದು 08840 ಸಂಖ್ಯೆ ರೈಲು ಪಶ್ಚಿಮ ಬಂಗಾಳದ  ಸಂತ್ರಾಗಾಚಿ ನಿಲ್ದಾಣದಿಂದ ಸಂಜೆ 6 ಗಂಟೆಗೆ ಹೊರಟು, ಮಾರ್ಚ್ 29ರಂದು ಬೆಳಿಗ್ಗೆ 8ಕ್ಕೆ ಹುಬ್ಬಳ್ಳಿ ನಿಲ್ದಾಣಕ್ಕೆ ಬರಲಿದೆ.

ಇದೇ ರೈಲು (08841) ಮಾರ್ಚ್ 30ರಂದು ಬೆಳಿಗ್ಗೆ 10.30ಕ್ಕೆ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು, ಏಪ್ರಿಲ್ 1ರಂದು ಮುಂಜಾನೆ 4.20ಕ್ಕೆ ಸಂತ್ರಗಾಚಿ ನಿಲ್ದಾಣ ತಲುಪಲಿದೆ.

ಖರಗಪುರ, ಟಾಟಾನಗರ, ಚಕ್ರಧರಪುರ, ರೂರ್ಕೆಲಾ, ಜಾರ್ಸುಗುಡ್, ಬಿಲಾಸಪುರ, ರಾಯಪುರ, ಗೊಂಡಿಯಾ, ಬಲ್ಹಾರ್ಷಾ, ಮಂಚಿರ್ಯಾಲ್, ಕಾಜಿಪೇಟೆ, ಸಿಕಂದರಾಬಾದ್, ರಾಯಚೂರು, ಗುಂತಕಲ್, ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಕೊಪ್ಪಳ ಮತ್ತು ಗದಗ ನಿಲ್ದಾಣಗಳ ಮೂಲಕ ರೈಲು ಸಂಚರಿಸಲಿದೆ.

ರೈಲುಗಳು ಸ್ಲೀಪರ್ ಕ್ಲಾಸ್ -22 ಮತ್ತು ಎಸ್ಎಲ್ಆರ್‌-2 ಸೇರಿದಂತೆ ಒಟ್ಟು 24 ಬೋಗಿಗಳು ಒಳಗೊಂಡಿರುತ್ತವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.