ADVERTISEMENT

ಹುಬ್ಬಳ್ಳಿ–ಯಲಹಂಕ: ಏಕಮುಖ ವಿಶೇಷ ರೈಲು

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 5:26 IST
Last Updated 13 ನವೆಂಬರ್ 2025, 5:26 IST
<div class="paragraphs"><p>ರೈಲು</p></div>

ರೈಲು

   

– ಪ್ರಜಾವಾಣಿ ಚಿತ್ರ

ಹುಬ್ಬಳ್ಳಿ: ನಿರೀಕ್ಷಿತ ಹೆಚ್ಚುವರಿ ಪ್ರಯಾಣಿಕರ ದಟ್ಟಣೆ ನಿಭಾಯಿಸಲು, ನೈರುತ್ಯ ರೈಲ್ವೆಯು ನ.13ರಂದು ಹುಬ್ಬಳ್ಳಿಯಿಂದ ಯಲಹಂಕಕ್ಕೆ ಏಕಮುಖ ವಿಶೇಷ ರೈಲನ್ನು ಓಡಿಸಲು ನಿರ್ಧರಿಸಿದೆ.

ADVERTISEMENT

ಎಸ್ಎಸ್ಎಸ್ ಹುಬ್ಬಳ್ಳಿ – ಯಲಹಂಕ ಏಕಮುಖ ವಿಶೇಷ ರೈಲು (07319) ನ.13 ರಂದು ರಾತ್ರಿ 8 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು, ಮರುದಿನ ಬೆಳಿಗ್ಗೆ 9.20ಕ್ಕೆ ಯಲಹಂಕ ತಲುಪಲಿದೆ.

ಅಣ್ಣಿಗೇರಿ, ಗದಗ, ಭಾನಾಪುರ, ಕೊಪ್ಪಳ, ಗಿಣಿಗೇರಾ, ಮುನಿರಾಬಾದ್, ಹೊಸಪೇಟೆ, ತೋರಣಗಲ್ಲು, ಬಳ್ಳಾರಿ, ಗುಂತಕಲ್, ಅನಂತಪುರ, ಧರ್ಮಾವರಂ, ಶ್ರೀಸತ್ಯ ಸಾಯಿ ಪ್ರಶಾಂತಿ ನಿಲಯ, ಹಿಂದೂಪುರ ಮತ್ತು ಗೌರಿಬಿದನೂರು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.