ADVERTISEMENT

ಹುಬ್ಬಳ್ಳಿ: ತರಗತಿಯಲ್ಲೇ ವಿದ್ಯಾರ್ಥಿ ಸಾವು, ಹೃದಯಾಘಾತ ಶಂಕೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 16:57 IST
Last Updated 2 ಜುಲೈ 2025, 16:57 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ ಜೆ.ಜಿ. ಕಾಮರ್ಸ್‌ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ರಾಹುಲ್‌ ಕುರಬಗೌಡರ (17) ಬುಧವಾರ ಮಧ್ಯಾಹ್ನ ತರಗತಿ ನಡೆಯುತ್ತಿದ್ದ ವೇಳೆ ಕುಸಿದು ಬಿದ್ದು, ಮೃತಪಟ್ಟಿದ್ದಾರೆ.

ADVERTISEMENT

ಗದಗ ಜಿಲ್ಲೆಯ ರೋಣದ ರಾಹುಲ್, ವಿದ್ಯಾನಗರದ ಹಾಸ್ಟೆಲ್‌ನಲ್ಲಿ ವಾಸವಿದ್ದರು. ಕುಸಿದು ಬಿದ್ದ ಕೂಡಲೇ ಅವರನ್ನು ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗೆ (ಕೆಎಂಸಿ–ಆರ್‌ಐ) ಕರೆದೊಯ್ಯಲಾಯಿತು. ಸಾವಿಗೆ ಹೃದಯಾಘಾತ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.

‘ರಾಹುಲ್‌ ಅವರಿಗೆ ಮೂರ್ಛೆ ರೋಗವಿತ್ತು ಎಂಬುದು ಅವರ ಪಾಲಕರಿಂದ ಗೊತ್ತಾಗಿದೆ. ಆಸ್ಪತ್ರೆಗೆ ಬರುವ ಬರುವ  ಮುನ್ನವೇ ಅವರು ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ’ ಎಂದು ಕೆಎಂಸಿ–ಆರ್‌ಐ ನಿರ್ದೇಶಕ ಎಸ್‌.ಎಫ್‌. ಕಮ್ಮಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.