ADVERTISEMENT

ಹುಬ್ಬಳ್ಳಿ: ಅಂತರ ಕಾಯ್ದುಕೊಳ್ಳದ ವಿದ್ಯಾರ್ಥಿಗಳು

puc

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 5:42 IST
Last Updated 18 ಜೂನ್ 2020, 5:42 IST
ಪಿಯುಸಿ ದ್ವಿತೀಯ ಇಂಗ್ಲಿಷ್‌ ಪರೀಕ್ಷೆ ಬರೆಯಲು ಹುಬ್ಬಳ್ಳಿ ಅಂತರ ಕಾಯ್ದುಕೊಳ್ಳದೆ ಸಾಲಿನಲ್ಲಿ ನಿಂತಿರುವುದು
ಪಿಯುಸಿ ದ್ವಿತೀಯ ಇಂಗ್ಲಿಷ್‌ ಪರೀಕ್ಷೆ ಬರೆಯಲು ಹುಬ್ಬಳ್ಳಿ ಅಂತರ ಕಾಯ್ದುಕೊಳ್ಳದೆ ಸಾಲಿನಲ್ಲಿ ನಿಂತಿರುವುದು   

ಹುಬ್ಬಳ್ಳಿ: ಪಿಯುಸಿ ದ್ವಿತೀಯ ಇಂಗ್ಲಿಷ್‌ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳು ಅಂತರ ಕಾಯ್ದುಕೊಳ್ಳದೆ ಸಾಲಾಗಿ ನಿಂತಿರುವುದು ನಗರದ ಹಲವಾರು ಕಾಲೇಜುಗಳ ಮುಂದೆ ಕಂಡು ಬಂದಿತು.

ಬೆಳಿಗ್ಗೆ 10.15ಕ್ಕೆ ಪರೀಕ್ಷೆ ಆರಂಭವಾಗಲಿದ್ದರೂ, ವಿದ್ಯಾರ್ಥಿಗಳು ಬೆಳಿಗ್ಗೆ 8.30ರಿಂದಲೇ ಸಾಲಿನಲ್ಲಿ ನಿಂತಿದ್ದರು. ಆದರೆ, ಅಂತರ ಕಾಯ್ದುಕೊಂಡಿರಲಿಲ್ಲ. ಒತ್ತೊತ್ತಾಗಿಯೇ ನಿಂತಿದ್ದರು. ಬಹುತೇಕರು ಮಾಸ್ಕ್‌ ಧರಿಸಿದ್ದು ಕಂಡು ಬಂದಿತು.

ಬಹು ದಿನಗಳ ಬಳಿಕ ಸ್ನೇಹಿತರು ಸಿಕ್ಕಿದ್ದರಿಂದ ಗುಂಪು, ಗುಂಪಾಗಿ ಚರ್ಚಿಸುತ್ತಿದ್ದು ಕಾಣಿಸಿತು.ಅವರನ್ನು ತಡೆಯಲು ಯಾವ ಅಧಿಕಾರಿಗಳು ಇದ್ದದ್ದು ಕಂಡು ಬರಲಿಲ್ಲ.

ADVERTISEMENT

ಥರ್ಮಲ್‌ ಸ್ಕ್ರೀನಿಂಗ್‌ ಮಾಡಿ, ಸ್ಯಾನಿಟೈಸರ್ ಹಾಕಿಯೇ ವಿದ್ಯಾರ್ಥಿಗಳನ್ನು ಒಳ ಬಿಡಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.