ಧಾರವಾಡ: ಕರ್ತವ್ಯ ಲೋಪ ಹಾಗೂ ಹಣಕಾಸು ದುರಪಯೋಗ ಆರೋಪದಡಿ ಕಲಘಟಗಿ ತಾಲ್ಲೂಕಿನ ತಂಬೂರು ಗ್ರಾಮ ಪಂಚಾಯಿತಿ (ಮುಕ್ಕಲ ಪಂಚಾಯಿತಿ ಹೆಚ್ಚುವರಿ ಹೊಣೆ) ಪಿಡಿಒ ನಾಗರಾಜಕುಮಾರ ಎಸ್. ಬಿದರಳ್ಳಿ ಅವರನ್ನು ಅಮಾನತುಗೊಳಿಸಲಾಗಿದೆ.
ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಅವರು ಅಮಾನತು ಆದೇಶ ಹೊರಡಿಸಿದ್ದಾರೆ. ನಾಗರಾಜಕುಮಾರ ಅವರು ತಂಬೂರ ಹಾಗೂ ಮುಕ್ಕಲ ಪಂಚಾಯಿತಿಗಳ ಎಸ್ಕೋ ಖಾತೆಯಿಂದ ಖಾಸಗಿ ವ್ಯಕ್ತಿಗಳಿಗೆ ಹಣ ಪಾವತಿಸಿರುವುದು ಕಂಡುಬಂದಿದೆ. ತಂಬೂರ ಪಂಚಾಯಿತಿಯಲ್ಲಿ ₹ 7.28 ಲಕ್ಷ ಹಾಗೂ ಮುಕ್ಕಲ ಪಂಚಾಯಿತಿಯಲ್ಲಿ ₹ 5.30 ಲಕ್ಷ ಹಣ ಖಾಸಗಿಯವರಿಗೆ ಸಂದಾಯವಾಗಿದೆ. ಎಸ್ಕೋ ಖಾತೆ ಅನುದಾನವನ್ನು ವಿದ್ಯುತ್ ಬಿಲ್ ಪಾವತಿಗೆ ಕಡ್ಡಾಯವಾಗಿ ಹೆಸ್ಕಾಂಗೆ ಪಾವತಿಸಬೇಕು ಎಂಬ ಸೂಚನೆಯನ್ನು ಪಾಲಿಸದಿರುವುದು, ನಿಯಮ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಆದೇಶದಲ್ಲಿ ತಿಳಿಸಿದ್ಧಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.