ADVERTISEMENT

ಕಲಘಟಗಿ: ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಉರುಳಿ ಸಂಚಾರಕ್ಕೆ ತೊಂದರೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2024, 16:20 IST
Last Updated 1 ಸೆಪ್ಟೆಂಬರ್ 2024, 16:20 IST
ಕಲಘಟಗಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಉರುಳಿ ಬಿದ್ದ ಪೆಟ್ರೋಲ್ ತುಂಬಿದ್ದ ಟ್ಯಾಂಕರ್
ಕಲಘಟಗಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಉರುಳಿ ಬಿದ್ದ ಪೆಟ್ರೋಲ್ ತುಂಬಿದ್ದ ಟ್ಯಾಂಕರ್   

ಕಲಘಟಗಿ: ಪಟ್ಟಣದ ಹೊರವಲಯದ ಜೈ ಹಿಂದ್ ಡಾಬಾ ಬಳಿ ಹುಬ್ಬಳ್ಳಿ –ಕಾರವಾರ ರಾಷ್ಟ್ರೀಯ ಹೆದ್ದಾರಿ –63ರಲ್ಲಿ ಭಾನುವಾರ ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದರಿಂದ ಕೆಲ ಸಮಯ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. 

ಟ್ಯಾಂಕರ್‌ ಯಲ್ಲಾಪುರ ಮಾರ್ಗವಾಗಿ ಹುಬ್ಬಳ್ಳಿ ಕಡೆ ಸಾಗುತ್ತಿತ್ತು. ಎದುರಿಗೆ ಜಾನುವಾರುಗಳು ಅಡ್ಡ ಬಂದಿದ್ದರಿಂದ ಅವುಗಳಿಗೆ ಡಿಕ್ಕಿ ಹೊಡೆಯುವುದು ತಪ್ಪಿಸಲು ಹೋದಾಗ ಘಟನೆ ನಡೆದಿದೆ. ಟ್ಯಾಂಕರ್‌ನಿಂದ ಅಪಾರ ಪ್ರಮಾಣದಲ್ಲಿ ಪೆಟ್ರೋಲ್ ಸೋರಿಕೆಯಾಗಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ.

ಟ್ಯಾಂಕರ್ ಉರುಳಿ ಬಿದ್ದಿದ್ದರಿಂದ ಈ ಮಾರ್ಗದಲ್ಲಿ ಒಂದು ಗಂಟೆಗೆ ಹೆಚ್ಚು ಸಮಯ ಸಂಚಾರಕ್ಕೆ ಅಡ್ಡಿಯಾಯಿತು.

ADVERTISEMENT

ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಕಲಘಟಗಿ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ  ಸಿಬ್ಬಂದಿ ಪೆಟ್ರೋಲ್ ಸೋರಿಕೆ ಆದ ಕಡೆ ನೀರು ಹರಿಸಿ ಬೆಂಕಿ ಹೊತ್ತಿಕೊಳ್ಳದಂತೆ ತಡೆದರು. 

ಸಿಪಿಐ ಶ್ರೀಶೈಲ್ ಕೌಜಲಗಿ, ಪಿಎಸ್ಐ ಬಸವರಾಜ ಯದ್ದಲಗುಡ್ಡ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಚಂದ್ರಕಾಂತ ಬಂಡಾರಿ, ಸಹಾಯಕ ಅಗ್ನಿಶಾಮಕ ಅಧಿಕಾರಿ ಅಶೋಕ ವಡ್ಡರ, ಸಿಬ್ಬಂದಿ ಆನಂದ ಮುದಿಯಣ್ಣವರ, ಅಶೋಕ ಲಮಾಣಿ, ಉಮೇಶ ತಂಬದ, ಹನುಮಂತಸಿಂಗ್ ರಜಪೂತ, ಸಂತೋಷ ಉಗ್ನಿಕೇರಿ, ಸಿದ್ಧಿಕ್ ಬಾಷಾ, ನಾಗರಾಜ ಪಾತ್ರೋಟ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.