ADVERTISEMENT

ಎಸ್‌ಡಿಎಂ ನಾರಾಯಣ ಹೃದಯ ಚಿಕಿತ್ಸಾಲಯ: ಟಿಎವಿಆರ್ ಚಿಕಿತ್ಸೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 15:59 IST
Last Updated 24 ಜೂನ್ 2025, 15:59 IST
ಎಸ್‌ಡಿಎಂ ನಾರಾಯಣ ಹಾರ್ಟ್‌ ಸೆಂಟರ್‌ನ ಡಾ. ರವಿ ಜೈನಾಪೂರ ಮತ್ತು ತಂಡ
ಎಸ್‌ಡಿಎಂ ನಾರಾಯಣ ಹಾರ್ಟ್‌ ಸೆಂಟರ್‌ನ ಡಾ. ರವಿ ಜೈನಾಪೂರ ಮತ್ತು ತಂಡ   

ಧಾರವಾಡ: ಐದು ತಿಂಗಳಿನಿಂದ ಎದೆನೋವಿನಿಂದ (ಕ್ಯಾಲ್ಸಿಫಿಕ್ ಅಯೊರ್ಟಿಕ್ ಸ್ಟೆನೊಸಿಸ್ ಮತ್ತು ಕೊರೊನರಿ ಆರ್ಟರಿ ಕಾಯಿಲೆ) ಬಳಲುತ್ತಿದ್ದ ಹಿರಿಯ ನಾಗರಿಕರೊಬ್ಬರಿಗೆ ಸತ್ತೂರಿನ ಎಸ್‌ಡಿಎಂ ನಾರಾಯಣ ಹೃದಯ ಚಿಕಿತ್ಸಾಲಯದ ವೈದ್ಯರು ಟ್ರಾನ್ಸ್ ಕ್ಯಾಥಿಟರ್ ಅಯೊರ್ಟಿಕ್‌ ವಾಲ್ವ್ ರಿಪ್ಲೇಸ್ಮೆಂಟ್ (ಟಿಎವಿಆರ್) ಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.

ಹೃದಯ ತಜ್ಞ ಡಾ.ರವಿ ಎಸ್.ಜೈನಾಪುರ ಮತ್ತು ತಂಡದವರು ಚಿಕಿತ್ಸೆ ನೆರವೇರಿಸಿದ್ದಾರೆ. ಇದು ಹೃದಯಕ್ಕೆ ಸಂಬಂಧಿಸಿದ ಅತ್ಯಾಧುನಿಕ ಚಿಕಿತ್ಸೆಗಳಲ್ಲೊಂದಾಗಿದೆ.

‘ಅಯೋರ್ಟಿಕ್ ಸ್ಟೆನೋಸಿಸ್ ಚಿಕಿತ್ಸೆಯಲ್ಲಿ ಓಪನ್- ಹಾರ್ಟ್ ಸರ್ಜರಿ ಸಾಧ್ಯವಿಲ್ಲದ ಪ್ರಕರಣಗಳಲ್ಲಿ ರೋಗಿಗಳಿಗೆ ಟ್ರಾನ್ಸ್ ಕ್ಯಾಥಿಟರ್ ಅಯೋರ್ಟಿಕ್ ವಾಲ್ವ್ ರಿಪ್ಲೇಸ್ಮೆಂಟ್ (ಟಿಎವಿಆರ್) ಮಹತ್ವದ ಚಿಕಿತ್ಸೆಯಾಗಿದೆ. ಸಾಂಪ್ರದಾಯಿಕ ಕವಾಟ ಬದಲಾವಣೆ ಚಿಕಿತ್ಸೆಗಿಂತ ಟಿಎವಿಆರ್ ಚಿಕಿತ್ಸೆ ಭಿನ್ನವಾಗಿದೆ. ತೀವ್ರತರ ಚಿಕಿತ್ಸೆಯಲ್ಲ. ಆಸ್ಪತ್ರೆ ವಾಸ ಹೆಚ್ಚು ಇರಲ್ಲ. ಒಂದೇ ಗಂಟೆಯಲ್ಲಿ ಚಿಕಿತ್ಸೆ ನೆರವೇರಿಸಲಾಗಿದೆ. ಚಿಕಿತ್ಸೆ ನಡೆದ ನಾಲ್ಕನೇ ದಿನಕ್ಕೆ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ’ ಎಂದು ಡಾ.ರವಿ ಎಸ್.ಜೈನಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.