ADVERTISEMENT

ಥಡಿಮಠದ ಅಭಿವೃದ್ಧಿಗೆ ಎಂ.ಬಿ.ಪಾಟೀಲ ದೇಣಿಗೆ: ಎನ್.‌ಎಚ್.‌ ಕೋನರಡ್ಡಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 2:25 IST
Last Updated 25 ಸೆಪ್ಟೆಂಬರ್ 2025, 2:25 IST
ನವಲಗುಂದ ಪಟ್ಟಣದಲ್ಲಿರುವ ಥಡಿಮಠ ಅಭಿವೃದ್ದಿ ಕುರಿತು ಶಾಸಕ ಎನ್‌.ಎಚ್‌. ಕೋನರಡ್ಡಿ ವೀಕ್ಷಿಸಿದರು
ನವಲಗುಂದ ಪಟ್ಟಣದಲ್ಲಿರುವ ಥಡಿಮಠ ಅಭಿವೃದ್ದಿ ಕುರಿತು ಶಾಸಕ ಎನ್‌.ಎಚ್‌. ಕೋನರಡ್ಡಿ ವೀಕ್ಷಿಸಿದರು   

ನವಲಗುಂದ: ಶಿರಸಂಗಿ ಲಿಂಗರಾಜ ಟ್ರಸ್ಟ್‌ನ ಅಧೀನದಲ್ಲಿರುವ ನವಲಗುಂದ ಥಡಿಮಠ ಅಭಿವೃದ್ಧಿ ನಿರ್ಮಾಣಕ್ಕೆ ಬೃಹತ್ ಕೈಗಾರಿಕಾ ಸಚಿವ ಎಮ್.ಬಿ.‌ಪಾಟೀಲ ಕುಟುಂಬದಿಂದ ₹50 ಲಕ್ಷ ದೇಣಿಗೆ ನೀಡಲು ಒಪ್ಪಿದ್ದಾರೆ ಎಂದು ಶಾಸಕ ಎನ್.‌ಎಚ್.‌ ಕೋನರಡ್ಡಿ ಹೇಳಿದರು.

ಪಟ್ಟಣದ ಥಡಿಮಠದಲ್ಲಿ ಮಂಗಳವಾರ ಕುಡವಕ್ಕಲಿಗ ಸಮಾಜದ ಮುಖಂಡರುಗಳ ಸಭೆಯಲ್ಲಿ ಮಾತನಾಡಿದರು.

ಈಗಾಗಲೇ ಬೆಳಗಾವಿಯಲ್ಲಿ ನಡೆದ ಟ್ರಸ್ಟನ ಸಭೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಟ್ರಸ್ಟ್‌ ಅಧ್ಯಕ್ಷ ಮಹಮ್ಮದ ರೋಷನ್‌ ಹಾಗೂ ಸದಸ್ಯರ ಜೊತೆ ಸಮಾಜದ ಮುಖಂಡರು ಸೇರಿ ಲಿಂಗರಾಜ ವಾಡೆ‌, ಥಡಿಮಠ, ಗಣಪತಿ ದೇವಸ್ಥಾನ ಮುಂತಾದ ಕಡೆ ಅಭಿವೃದ್ದಿ ಪಡಿಸಲು ಮನವಿ ಮಾಡಿದಾಗ ಸೆ.26ರಂದು ಪರಿವೀಕ್ಷಣೆಗೆ ಆಗಮಿಸಲು ಒಪ್ಪಿದ್ದಾರೆ ಎಂದರು.

ADVERTISEMENT

’ಥಡಿಮಠ ಅಭಿವೃದ್ದಿಪಡಿಸಲು ಬೃಹತ್ ಕೈಗಾರಿಕಾ ಸಚಿವ ಎಮ್.‌ಬಿ.ಪಾಟೀಲ ಅವರು ₹50 ಲಕ್ಷ ಸ್ವಂತ ಹಣ ನೀಡುವ ಮೂಲಕ ಇತಿಹಾಸ ನಿರ್ಮಿಸಿದ್ದು ಸಮಾಜದ ಪರವಾಗಿ ಹಾಗೂ ಕ್ಷೇತ್ರದ ಶಾಸಕನಾಗಿ ಅವರಿಗೆ ಅಭಿನಂದಿಸುತ್ತೇನೆ ಎಂದು ಕೋನರಡ್ಡಿ ಹೇಳಿದರು. ನಂತರ ಥಡಿಮಠ ವೀಕ್ಷಿಸಿದರು.

ತಾಲ್ಲೂಕು ಕುಡುವಕ್ಕಲಿಗ ಸಮಾಜದ ಅಧ್ಯಕ್ಷ ನಿಂಗಪ್ಪ ಹಳ್ಳದ, ಬಸವರಾಜ ಹರಿವಾಳದ, ಲಕ್ಷಣ ಹಳ್ಳದ, ಪ್ರಕಾಶ ಶಿಗ್ಲಿ, ನಾಗಪ್ಪ ಸಂಗಟಿ, ಲಕ್ಷ್ಮಣ ಜವಳಗಿ, ಅಡಿವೆಪ್ಪ ಶಿರಸಂಗಿ, ಗಂಗಾಧರ ಹಳ್ಳದ, ಬಸವರಾಜ ಸೋಮಗೊಂಡ, ಅಪ್ಪಣ್ಣ ಹಳ್ಳದ, ಮಂಜುನಾಥ ಸುಬೇದಾರ, ನಾಗಪ್ಪ ಬಿಸನಾಳ, ಬಸವರಾಜ ಹಳ್ಳದ, ಡಿ.ಬಿ. ಬಿಸನಾಳ, ಮರಿತಮ್ಮಪ್ಪ ಹಳ್ಳದ, ಯಲ್ಲಪ್ಪ ಹಳ್ಯಾಳ, ಫಕ್ಕೀರಪ್ಪ ಹಳ್ಳದ, ಮಲ್ಲಿಕಾರ್ಜುನ ಜಲಾದಿ, ಶಿವಣ್ಣ ಹುಬ್ಬಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.