
ಬಂಧನ (ಸಾಂದರ್ಭಿಕ ಚಿತ್ರ)
ಧಾರವಾಡ: ನಗರದ ಲೈಬ್ ಬಜಾರ್‌ನ ಶೀತಲನಾಥ ಜೈನ ಮಂದಿರದಲ್ಲಿದ್ದ ಬೆಳ್ಳಿ ಆಭರಣ, ನಗದು ಕಳವು ಪ್ರಕರಣದ ಆರೋಪಿ ಮಲ್ಲಪ್ಪ ಅಲಿಯಾಸ್ ಮಲ್ಲೇಶನನ್ನು (31) ಬಂಧಿಸಿ, ಬೆಳ್ಳಿ ಒಡವೆ ಮತ್ತು ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ಮಲ್ಲಪ್ಪ ನಗರದ ಟಿಕಾರೆ ರಸ್ತೆಯ ಪ್ಲಾಜಾದಲ್ಲಿ ವಾಚ್‌ಮನ್ ಆಗಿದ್ದ. ಮೂಲತಃ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಹುಣಸಿಕಟ್ಟಿ ಗ್ರಾಮದವ. ಆರೋಪಿಯಿಂದ 1,565 ಗ್ರಾಂ ಬೆಳ್ಳಿ ಆಭರಣ ಹಾಗು ₹ 30 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
ಶಹರ ಠಾಣೆ ಇನ್‌ಸ್ಪೆಕ್ಟರ್ ಗುರುನಾಥ ಚವ್ಹಾಣ, ಪಿಎಸ್‌ಐ ವಿನೋದ ಡಿ. ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆ ಹೆಚ್ಚಿದೆ. ಜೈನ ಮಂದಿರದಲ್ಲಿ ಜ. 19ರಂದು ರಾತ್ರಿ ಕಳವು ನಡೆದಿತ್ತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.