ADVERTISEMENT

ಧಾರವಾಡ: ನೋಡಬನ್ನಿ ಅಪರೂಪದ ‘ಎಣ್ಣೆ ಬುಟ್ಟಿ’...

ವಾಸುದೇವ ಮುರಗಿ
Published 28 ಫೆಬ್ರುವರಿ 2021, 1:51 IST
Last Updated 28 ಫೆಬ್ರುವರಿ 2021, 1:51 IST
ಗುಡಗೇರಿ ಗ್ರಾಮದ ರಾಜು ಮಳಲಿ ಅವರ ಮನೆಯಲ್ಲಿರುವ ವಿವಿಧ ತರಹದ ಕೇರುವ ಮರ, ಹಂಡೆ, ಟಪಾಲಿ, ಕೊಳಗಗಳು.
ಗುಡಗೇರಿ ಗ್ರಾಮದ ರಾಜು ಮಳಲಿ ಅವರ ಮನೆಯಲ್ಲಿರುವ ವಿವಿಧ ತರಹದ ಕೇರುವ ಮರ, ಹಂಡೆ, ಟಪಾಲಿ, ಕೊಳಗಗಳು.   

ಗುಡಗೇರಿ: ನಮ್ಮ ಪೂರ್ವಜರು ತಮ್ಮ ಬದುಕು ನಡೆಸಲು ಪರಿಸರ ಸ್ನೇಹಿ ವಸ್ತುಗಳನ್ನೇ ಹೆಚ್ಚಾಗಿ ಬಳಕೆ ಮಾಡಿಕೊಳ್ಳುತ್ತ ಜೀವನ ಸಾಗಿಸುತ್ತಿದ್ದರು. ಇದರ ಜೊತೆಗೆ ತಮ್ಮ ಮುಂದಿನ ಪೀಳಿಗೆಯೂ ಪರಿಸರ ಶುದ್ಧವಾಗಿಟ್ಟುಕೊಳ್ಳುವಂತೆ ಪ್ರೇರೇಪಿಸುತ್ತಿದ್ದರು. ಆದರೆ, ಆಧುನಿಕ ಯುಗದ ಭರಾಟೆಯಲ್ಲಿ, ಹಳ್ಳಿಗಳು ಕೂಡ ನಗರ ಪ್ರದೇಶದ ವಾತಾವರಣಕ್ಕೆ ಮನಸೋಲುತ್ತಿರುವುದರಿಂದ ಸಾಂಪ್ರದಾಯಿಕ ಕಲಾ ಪದ್ಧತಿ ಅವನತಿಯತ್ತ ಸಾಗುತ್ತಿದೆ.

ಹಿರಿಯರು ತಮ್ಮ ಜೀವನ ನಡೆಸಲು ಬಿದಿರು, ಮಣ್ಣಿನ ಮಡಿಕೆ, ಹರಿವೆ, ಬೀಸುಕಲ್ಲು ಹೀಗೆ ಅನೇಕ ವಸ್ತುಗಳನ್ನು ಬಳಸುತ್ತಿದ್ದರು. ವಸ್ತುಗಳನ್ನು ಸಂಗ್ರಹಿಸಲುವಿವಿಧ ಆಕಾರಗಳ ಎಣ್ಣೆ ಬುಟ್ಟೆಗಳನ್ನು ಬಳಕೆ ಮಾಡುತ್ತಿದ್ದರು. ಬಿದಿರಿನಿಂದ ಹೆಣೆದ ಬಿದಿರಿನ ಬುಟ್ಟಿ, ಗುಳ್ಳೆ ಬುಟ್ಟೆ, ಬಳಗದ ಬುಟ್ಟೆ, ಪತ್ರಿ ಬುಟ್ಟೆ, ನಾಲ್ಕು ಮೂಲಿ ಬುಟ್ಟಿ, ಇಚ್ಛಲ ಬುಟ್ಟೆ, ಹೆಡಿಗಿ ಬುಟ್ಟೆ, ಜಲ್ಲಿ ಬುಟ್ಟೆ ಹೀಗೆ ಅನೇಕ ತರಹದ ಬಿದಿರಿನ ಬುಟ್ಟೆಗಳು ಬಳಕೆಯಲ್ಲಿದ್ದವು.

ಮನೆಗೆ ಉಪಯೋಗಿಸುವ ಬುಟ್ಟೆಗಳಿಗೆ ಹಳೆಯ ಕಾಟನ್ ಬಟ್ಟೆಗಳನ್ನು ಸುಟ್ಟು ಕುಸುಬೆ ಎಣ್ಣೆಯಿಂದ ಅರಿದು ಬಿದಿರಿನ ಬುಟ್ಟೆಗಳಿಗೆ ಲೇಪಿಸಿದಾಗ ಅವುಗಳು ಎಣ್ಣೆ ಬುಟ್ಟೆಗಳಾಗಿ ಕಂಗೊಳಿಸುತ್ತಿದ್ದವು. ಅದರೊಟ್ಟಿಗೆ ವಸ್ತುಗಳನ್ನು ಹಸನಗೊಳಿಸಲು ವಿವಿಧ ತರಹದ ಮರಗಳನ್ನು ಬಳಸುತ್ತಿದ್ದರು.

ADVERTISEMENT

ಗುಡಗೇರಿ ಗ್ರಾಮದ ರಾಜು ಮಳಲಿ ಅವರ ಮನೆಯಲ್ಲಿ ಹಿರಿಯರು ಬಳಸುತ್ತಿದ್ದ ಅನೇಕ ತರಹದ ಬುಟ್ಟೆಗಳು, ಕೇರುವ ಮರ, ಹಂಡೆ, ಹರಿವೆಗಳು, ತತ್ರಾಣಿ ಹೀಗೆ ಅನೇಕ ತರಹದ ವಸ್ತುಗಳು ಈಗಲೂ ಇವೆ.

ಅವರನ್ನು ‘ಪ್ರಜಾವಾಣಿ’ ಮಾತನಾಡಿಸಿದಾಗ ‘ನಮ್ಮ ಹಿರಿಯರು ಇವುಗಳನ್ನು ಬಳಕೆ ಮಾಡುತ್ತಿದ್ದರು. ಇವುಗಳನ್ನು ಚೆಲ್ಲಲು ಮನಸ್ಸು ಬಾರದೇ ಹಾಗೆ ನಮ್ಮ ಮುಂದಿನ ಪೀಳಿಗೆಗೆ ನೋಡುವುದಕ್ಕಾಗಿ ಹಾಗೆ ಸಂಗ್ರಹಿಸಿದ್ದೇನೆ. ಮುಂದಿನ ಜನಾಂಗಕ್ಕೂ ನಮ್ಮ ಹಳೆಯ ಕಲಾ ಪದ್ಧತಿ ಗೊತ್ತಾಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.