
ಹುಬ್ಬಳ್ಳಿ: ವಂದಾಲ್ ಮತ್ತು ಬಸವನ ಬಾಗೇವಾಡಿ ರೋಡ್ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ (ಗೇಟ್ ಸಂಖ್ಯೆ 62) ಬಳಿ ಕಾಮಗಾರಿ ಕೈಗೊಂಡಿರುವ ಕಾರಣ ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ಭಾಗಶಃ ರದ್ದು: ಮಾರ್ಚ್ 11 ಮತ್ತು 22 ರಂದು ಹುಬ್ಬಳ್ಳಿಯಿಂದ ಹೊರಡುವ ಎಸ್ಎಸ್ಎಸ್ ಹುಬ್ಬಳ್ಳಿ – ವಿಜಯಪುರ ಡೆಮು ಸ್ಪೆಷಲ್ ರೈಲು (07329) ಬಾಗಲಕೋಟೆ ನಿಲ್ದಾಣದಲ್ಲಿ ತನ್ನ ಪ್ರಯಾಣ ಮುಕ್ತಾಯಗೊಳಿಸಲಿದೆ. ಬಾಗಲಕೋಟೆ ಮತ್ತು ವಿಜಯಪುರ ನಡುವೆ ಈ ರೈಲಿನ ಸಂಚಾರ ರದ್ದುಪಡಿಸಲಾಗಿದೆ.
ಮಾರ್ಚ್ 12 ಮತ್ತು 23ರಂದು ವಿಜಯಪುರ – ಎಸ್ಎಸ್ಎಸ್ ಹುಬ್ಬಳ್ಳಿ ಡೆಮು ಸ್ಪೆಷಲ್ (07330) ರೈಲು ವಿಜಯಪುರದ ಬದಲಾಗಿ ಬಾಗಲಕೋಟೆ ನಿಲ್ದಾಣದಿಂದ ತನ್ನ ಪ್ರಯಾಣ ಆರಂಭಿಸಲಿದೆ.
ನಿಯಂತ್ರಣ: ಧಾರವಾಡದಿಂದ ಸೊಲ್ಲಾಪುರಕ್ಕೆ ತೆರಳುವ ಪ್ಯಾಸೆಂಜರ್ ರೈಲು (56904) ಮಾರ್ಚ್ 10, 11, 21 ಮತ್ತು 22ರಂದು ಮಾರ್ಗಮಧ್ಯೆ ಸುಮಾರು 30 ನಿಮಿಷ ಕಾಲ ನಿಯಂತ್ರಣವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.