ADVERTISEMENT

ಹುಬ್ಬಳ್ಳಿ: ಪೊಲೀಸ್‌ ಕಮಿಷನರ್‌, ಡಿಸಿಪಿ, ಎಸ್‌ಪಿ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 15:38 IST
Last Updated 20 ಅಕ್ಟೋಬರ್ 2020, 15:38 IST
   

ಹುಬ್ಬಳ್ಳಿ: ಬಹಿರಂಗ ‘ಪತ್ರ ವ್ಯವಹಾರ’ದ ಮೂಲಕ ವಿವಾದಕ್ಕೆ ಗುರಿಯಾಗಿದ್ದ ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರ್‌ ಆರ್‌. ದಿಲೀಪ್‌ ಮತ್ತುಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಪಿ. ಕೃಷ್ಣಕಾಂತ್ ಅವರನ್ನು ವರ್ಗಾವಣೆ ಮಾಡಿ ಮಂಗಳವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಧಾರವಾಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್‌ ಅವರನ್ನೂ ವರ್ಗಾವಣೆ ಮಾಡಲಾಗಿದೆ. ವರ್ತಿಕಾ ಅವರಿಗೆ ಹುದ್ದೆ ತೋರಿಸಿಲ್ಲ.

ದಿಲೀಪ್‌ ಅವರನ್ನುಸಿಐಡಿ ಆರ್ಥಿಕ ಅಪರಾಧಗಳ ವಿಭಾಗದ ಡಿಐಜಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.ಇಲ್ಲಿನ ಕಮಿಷನರೇಟ್‌ಗೆ ಕಮಿಷನರ್‌ ಆಗಿ ಐಪಿಎಸ್‌ ಅಧಿಕಾರಿ ಲಾಬೂ ರಾಮ್‌ ಅವರನ್ನು ಮತ್ತುಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿಕೃಷ್ಣಕಾಂತ್‌ ಅವರನ್ನು ನೇಮಿಸಲಾಗಿದೆ.

ಭೇಟಿಗೆ ಅವಕಾಶ ಕೊಡುತ್ತಿಲ್ಲ ಎಂದು ಆರೋಪಿಸಿ ಕೃಷ್ಣಕಾಂತ್‌ ಅವರು ದಿಲೀಪ್ ವಿರುದ್ಧ ಬಹಿರಂಗವಾಗಿ ಪತ್ರ ಬರೆದಿದ್ದರು. ಇದಕ್ಕೆ ಕಮಿಷನರ್‌ ನೋಟಿಸ್ ನೀಡಿದ್ದರು. ಈ ಎಲ್ಲ ಘಟನೆಗಳು ಮತ್ತು ಪತ್ರಗಳುಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿ ಸಾಕಷ್ಟು ಟೀಕೆ, ಪ್ರತಿಟೀಕೆಗೂ ಕಾರಣವಾಗಿತ್ತು. ಈ ಘಟನೆ ನಡೆದ ಬಳಿಕ ಹುಬ್ಬಳ್ಳಿಗೆ ಬಂದಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ‘ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.