ನವಲಗುಂದ: ‘ತಾಯಿ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಪ್ರತಿಯೊಬ್ಬರೂ ಅಮ್ಮನ ಹೆಸರಿನಲ್ಲಿ ಸಸಿ ನೆಟ್ಟು ಬೆಳೆಸಿ ಪ್ರಕೃತಿಗೆ ಕೊಡುಗೆ ನೀಡಬೇಕು’ ಎಂದು ವಲಯ ಅರಣ್ಯಧಿಕಾರಿ ಕಿರಣಕುಮಾರ ಕರತಂಗಿ ಹೇಳಿದರು.
ತಾಲ್ಲೂಕಿನ ಜಾವೂರ ಕ್ರಾಸ್ ಬಳಿ ಮಂಗಳವಾರ ಸಸಿ ನೆಡುವ ಮೂಲಕ ಅರಣ್ಯೀಕರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮರಗಳನ್ನು ನೆಡುವುದು ಹಾಗೂ ಭೂಮಿಯ ಅವನತಿಯನ್ನು ತಡೆಯುವುದು ಅಭಿಯಾನದ ಮೂಲ ಉದ್ದೇಶವಾಗಿದ್ದು ಈ ವರ್ಷದಲ್ಲಿ 21,500 ಸಸಿಗಳನ್ನು ನಾಟಿ ಮಾಡುವುದು ಅಭಿಯಾನದ ಮೂಲ ಉದ್ದೇಶವಾಗಿದೆ ಎಂದರು.
ಉಪ ವಲಯ ಅರಣ್ಯಧಿಕಾರಿಗಳಾದ ಮಂಜುನಾಥ ಹಳ್ಳಿಕೇರಿ, ಜಯಕುಮಾರ್ ವಾಲಿಕಾರ, ಗಸ್ತು ಅರಣ್ಯ ಪಾಲಕ ಭರಮಪ್ಪ ಸರಾವರಿ, ಬಿ.ಆರ್. ಹಡಪದ, ನಾಗರಾಜ ಮರಿಸಿದ್ದಣ್ಣವರ ಸೇರಿದಂತೆ ರೈತರು, ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.