
ಕಲಘಟಗಿ: ಸ್ಥಳೀಯ ಗುಡ್ ನ್ಯೂಸ್ ಪದವಿ ಪೂರ್ವ ಮಹಾವಿದ್ಯಾಲಯದಿಂದ ತಾಲ್ಲೂಕಿನ ಹಟಕಿನಾಳ ಗ್ರಾಮದಲ್ಲಿ ನಡೆಯುತ್ತಿರುವ ಎನ್ಎಸ್ಎಸ್ ಶಿಬಿರದ ಅಂಗವಾಗಿ ಶಿಬಿರಾರ್ಥಿಗಳು ಸಾಲು ಮರದ ತಿಮ್ಮಕ್ಕನ ಸವಿ ನೆನಪಿಗಾಗಿ ಶಾಲಾ ಆವರಣದಲ್ಲಿ ಸೋಮವಾರ 50 ಸಸಿ ನೆಟ್ಟರು.
ಎನ್ಎಸ್ಎಸ್ ಸಂಘಟಕ ಜಾಫರ್ ಬಾವನವರ ಮಾತನಾಡಿ, ‘ಶಿಬಿರಾರ್ಥಿಗಳು ಗ್ರಾಮದ ಶಾಲಾ ಆವರಣದಲ್ಲಿ ನೆಟ್ಟ ಸಸಿಗಳ ಪಾಲನೆ, ಪೋಷಣೆ ಮಾಡುವ ಜವಾಬ್ದಾರಿ ಎಲ್ಲರದ್ದೂ ಆಗಿದೆ. ಅವುಗಳನ್ನು ಉಳಿಸಿ ಬೆಳೆಸಿ. ಸಾಲು ಮರದ ತಿಮ್ಮಕ್ಕನ ಹೆಸರು ನಿಮ್ಮ ಗ್ರಾಮದಲ್ಲಿ ಅಜರಾಮರವಾಗಿರಲಿ’ ಎಂದು ತಿಳಿಸಿದರು.
ಗ್ರಾಮದ ಹಿರಿಯರಾದ ಶಿವನಗೌಡ ದೊಡಮನಿ, ಮಲ್ಲಯ್ಯ ಗೊಡಿಮನಿ, ಬಸವರಾಜ್ ಬಡಿಗೇರ, ಬಸಯ್ಯ ಗೊಡಿಮನಿ, ಶಾಲೆಯ ಮುಖ್ಯ ಶಿಕ್ಷಕ, ಪಿ.ಬಿ. ದಳವಿ, ಎಸ್.ಬಿ. ಕುರವತ್ತಿ, ಎಂ.ಸಿ. ಕುಂದಗೋಳ, ಎಂ.ಎಂ. ತಲ್ಲೂರ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.