ADVERTISEMENT

ಬಿಲ್‌ ಕಲೆಕ್ಟರ್‌ ಬಸವರಾಜ, ಎಸ್‌ಡಿಎ ಅನ್ನಪೂರ್ಣ ಅಮಾನತು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 6:28 IST
Last Updated 24 ಫೆಬ್ರುವರಿ 2026, 6:28 IST
<div class="paragraphs"><p>ಅಮಾನತು</p></div>

ಅಮಾನತು

   

ಧಾರವಾಡ: ಚುನಾವಣೆ (ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ) ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸಿದ್ಧಾರೆ ಎಂದು ಹು–ಧಾ ಮಹಾನಗರ ಪಾಲಿಕೆ ಬಿಲ್‌ ಕಲೆಕ್ಟರ್‌ ಬಸವರಾಜ ನಿಗದಿ, ಜಿಲ್ಲಾ ಕೇಂದ್ರ ಗ್ರಂಥಾಲಯದ ಎಸ್‌ಡಿಎ ಅನ್ನಪೂರ್ಣ ಎಸ್‌.ಸವದಿ ಅವರನ್ನು ಸೋಮವಾರ ಅಮಾನತುಗೊಳಿಸಲಾಗಿದೆ.

ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಸೂಚನೆ ನೀಡಿದರೂ ಮತಗಟ್ಟೆ ಅಧಿಕಾರಿಗಳಾದ ಬಸವರಾಜ ನಿಗದಿ (ಭಾಗ ಸಂಖ್ಯೆ 137)  ಮತ್ತು ಅನ್ನಪೂರ್ಣ ಎಸ್‌. ಸವದಿ (ಭಾಗ ಸಂಖ್ಯೆ 160) ಅವರು ಪ್ರೊಜನಿ ಮ್ಯಾಪಿಂಗ್‌ ಕಾರ್ಯ ಆರಂಭಿಸಿಲ್ಲ. ಇಬ್ಬರೂ ವಹಿಸಿದ ಕಾರ್ಯನಿರ್ವಹಿಸದಿರುವುದು, ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಆದೇಶದಲ್ಲಿ ತಿಳಿಸಿದ್ಧಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.