
ಪ್ರಜಾವಾಣಿ ವಾರ್ತೆ
ಹುಬ್ಬಳ್ಳಿ: ಪ್ರಸ್ತುತ ವರ್ಷ ನಗರದ ಉಣಕಲ್, ಗೋಪನಕೊಪ್ಪ, ದೇವಾಂಗಪೇಟೆ ಗ್ರಾಮದ ದೇವಿಯರಿಗೆ ಬಣ್ಣ ಹಚ್ಚುವುದರಿಂದ ಹೋಳಿ ಹಬ್ಬದಂದು ಬಣ್ಣ ಆಟಕ್ಕೆ ಗ್ರಾಮಸ್ಥರು ನಿಷೇಧ ಹೇರಿದ್ದಾರೆ.
ಉಣಕಲ್ ಭಾಗದಲ್ಲಿ ಹೋಳಿ ಹುಣ್ಣಿಮೆಯಂದು ಹಾಗೂ ಗೋಪನಕೊಪ್ಪದಲ್ಲಿ ರಂಗ ಪಂಚಮಿಯಂದು ಸಾರ್ವಜನಿಕರು ಬಣ್ಣವಾಡಿ, ಕಾಮ ದಹನ ಮಾಡುತ್ತಿದ್ದರು. ಪ್ರಸ್ತುತ ವರ್ಷ ಉಣಕಲ್‌ನಲ್ಲಿ ದ್ಯಾವಮ್ಮ ಮತ್ತು ದುರ್ಗಮ್ಮ ದೇವಿಯರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಇರುವುದರಿಂದ, ಮೂರ್ತಿಗಳಿಗೆ ಬಣ್ಣ ಹಚ್ಚುವ ಕಾರ್ಯ ನಡೆಯುತ್ತಿದೆ. ಈ ಕುರಿತು ಧ್ವನಿವರ್ಧಕದ ಮೂಲಕ ಗ್ರಾಮಸ್ಥರಿಗೆ ಮಾಹಿತಿ ನೀಡುತ್ತಿದ್ದಾರೆ.
ಗೋಪನಕೊಪ್ಪ ಮತ್ತು ದೇವಾಂಗ ಪೇಟೆ ಗ್ರಾಮದ ದ್ವಾಮವ್ವ ಮೂರ್ತಿಗೆಗೂ ಬಣ್ಣ ಹಚ್ಚುವ ಕಾರ್ಯ ನಡೆಯುತ್ತಿದೆ. ಮಾರ್ಚ್ 12 ರಿಂದ ಮಾರ್ಚ್ 17ರವರೆಗೆ ಮೂರ್ತಿ ಪುನರ್ ಪ್ರತಿಷ್ಠಾಪನಾ ಕಾರ್ಯ ನಡೆಯಲಿದೆ. ವಾಡಿಕೆಯಂತೆ ಗ್ರಾಮದ ವ್ಯಾಪ್ತಿಯಲ್ಲಿ ಬಣ್ಣ ಆಡುವುದಿಲ್ಲ. ಹೀಗಾಗಿ ಆ ದಿನಗಳಂದು ಯಾರೂ ಬಣ್ಣ ಆಡಬಾರದು ಎಂದು ಗ್ರಾಮದ ಹಿರಿಯರು ನಿರ್ಧರಿಸಿದ್ದಾರೆ ಎಂದು ರೈತ ಈಶ್ವರಗೌಡ ಪಾಟೀಲ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.