ADVERTISEMENT

ಉಪ್ಪಿನಬೆಟಗೇರಿ | ಮಕ್ಕಳ ಕಲಿಕೆಗೆ ತೊಂದರೆಯಾದರೆ ಕ್ರಮ: ರಾಮಕೃಷ್ಣ ಸದಲಗಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 5:41 IST
Last Updated 27 ನವೆಂಬರ್ 2025, 5:41 IST
ಉಪ್ಪಿನಬೆಟಗೇರಿ ಸಮೀಪದ ಹನುಮನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ಧಾರವಾಡ ಗ್ರಾಮೀಣ ಬಿಇಒ ರಾಮಕೃಷ್ಣ ಸದಲಗಿ ಭೇಟಿ ನೀಡಿ, ಸಭೆ ನಡೆಸಿದರು
ಉಪ್ಪಿನಬೆಟಗೇರಿ ಸಮೀಪದ ಹನುಮನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ಧಾರವಾಡ ಗ್ರಾಮೀಣ ಬಿಇಒ ರಾಮಕೃಷ್ಣ ಸದಲಗಿ ಭೇಟಿ ನೀಡಿ, ಸಭೆ ನಡೆಸಿದರು   

ಉಪ್ಪಿನಬೆಟಗೇರಿ: ‘ಶಾಲಾ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಶಿಕ್ಷಕರು ನೋಡಿಕೊಳ್ಳಬೇಕು. ಇಲ್ಲದಿದ್ದರೆ ಕ್ರಮ ಜರುಗಿಸಲಾಗುವುದು’ ಎಂದು ಧಾರವಾಡ ಗ್ರಾಮಿಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಹೇಳಿದರು.

ಸಮೀಪದ ಹನುಮನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ಭೇಟಿ ನೀಡಿ ಸಭೆ ನಡೆಸಿ ಮಾತನಾಡಿದರು.

ಕಲಿಕಾ ಪ್ರಗತಿ, ಹಿಂದುಳಿದ ಮಕ್ಕಳ ಮಾಹಿತಿ ಪಡೆದು ಶಿಕ್ಷಣದಲ್ಲಿ ಮಕ್ಕಳು ಹಿಂದುಳಿದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಪ್ರಾಥಮಿಕ ಹಂತದ ಶಿಕ್ಷಣ ಅಗತ್ಯವಾಗಿದ್ದು, ಸಮಗ್ರ ಬೆಳವಣಿಗೆಗೆ ಯೋಜನೆ ರೂಪಿಸಿ ಕಾರ್ಯ ಪ್ರವೃತ್ತರಾಗಬೇಕು ಎಂದು ತಾಕೀತು ಮಾಡಿದರು.

ADVERTISEMENT

ಶಾಲಾ ಅಭಿವೃದ್ದಿ ಸಮಿತಿ ಹಾಗೂ ಶಿಕ್ಷಕರು ಶಾಲಾ ಸುಧಾರಣೆಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಮಾಸಿಕ ಸಭೆ ನಡೆಸಿ ಮೇಲಾಧಿಕಾರಿಗಳ ಗಮನಕ್ಕೆ ತರುವುದು ಸೇರಿದಂತೆ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ಮೃತ್ಯುಂಜಯ ಯರಗಂಬಳಿಮಠ, ಕಾಶಪ್ಪ ದೊಡವಾಡ, ಬಸವರಾಜ ಬೊಬ್ಬಿ, ಅನೀಲ ಕಮ್ಮಾರ, ಪದ್ಮರಾಜ ಕಾಗಿ, ಬಾಹುಬಲಿ ಛಬ್ಬಿ, ಸಿದ್ದನಗೌಡ ಪಾಟೀಲ, ಅಬ್ದುಲ್ ಬಿಜಾಪೂರ, ಸವಿತಾ ವಿಭೂತಿಮಠ, ದೀಪಾ ದೊಡವಾಡ, ಲಕ್ಮೀ ಹರಿಜನ, ಸುಮಾ ದೊಡವಾಡ, ಕುಸುಮಾ ಮುಮ್ಮಿಗಟ್ಟಿ, ಪುಷ್ಪಾ ಅಷ್ಟಗಿ ಪ್ರಕಾಶ ಹೂಗಾರ ಹಾಗೂ ಶಿಕ್ಷಕರು ಇದ್ದರು.

ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ ರಾಜೀನಾಮೆ ಕೈಬಿಡಲು ಎಸ್‌ಡಿಎಂಸಿ ಸಮಿತಿಯವರಿಗೆ ಮನವೊಲಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರಗತಿ ಪರಿಶೀಲಿಸಲಾಗುವುದು
ರಾಮಕೃಷ್ಣ ಸದಲಗಿ ಬಿಇಒ ಧಾರವಾಡ ಗ್ರಾಮೀಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.