ಉಪ್ಪಿನಬೆಟಗೇರಿ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸ್ಥಾಪಿಸಲಾದ ಖರೀದಿ ಕೇಂದ್ರದಲ್ಲಿ ಈಗಾಗಲೇ ನೊಂದಣಿ ಕಾರ್ಯ ಶುರುವಾಗಿದೆ. ಬೆರಳಚ್ಚು ಮಶಿನ್ (ಬಯೋಮೆಟ್ರಿಕ್) ಕಡ್ಡಾಯ ಮಾಡಿದ್ದು ಹಾಗೂ ಸರ್ವರ್ ಸಮಸ್ಯೆ ರೈತರನ್ನು ಸಂಕಷ್ಟಕ್ಕೆ ದೂಡಿದೆ.
ರೈತರು ನಿಯಮಾನುಸಾರ ಬ್ಯಾಂಕ್ ಪಾಸ್ ಬುಕ್, ಪಹಣಿ ಪತ್ರ, ಆಧಾರ್ ಕಾರ್ಡ್ ಪ್ರತಿ ಸಲ್ಲಿಸಬೇಕು. ನಂತರ ಬಯೋಮೆಟ್ರಿಕ್‌ನಲ್ಲಿ ಬೆರಳಚ್ಚು ನೀಡಬೇಕು. ಅದು ತೆಗೆದುಕೊಳ್ಳದಿದ್ದರೆ, ಖರೀದಿ ಕೇಂದ್ರಕ್ಕೆ ಅಲೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಅಧಿಕಾರಿಗಳು ಸುಲಭ ವಿಧಾನದಲ್ಲಿ ನೊಂದಣಿಗೆ ಅವಕಾಶ ಕಲ್ಪಿಸಬೇಕು ಎಂದು ಕರಡಿಗುಡ್ಡ ಗ್ರಾಮದ ರೈತ ಮಲ್ಲಿಕಾರ್ಜುನ ಜಕ್ಕನ್ನವರ ಆಗ್ರಹಿಸಿದರು.
ವ್ಯಾಪಾರಸ್ಥರಿಗೆ ಹೆಸರು, ಉದ್ದು ಮಾರಾಟ ಮಾಡಬೇಕೆಂದರೆ ಧಾರಣೆ ಕಡಿಮೆ ಇದೆ. ಸರ್ಕಾರದ (ಎಂಎಸ್‌ಪಿ)ಖರೀದಿ ಕೇಂದ್ರದಲ್ಲಿ ಹೆಸರು ಕಾಳಿಗೆ ₹ 8,768 ಹಾಗೂ ಉದ್ದು ₹7,800 ಹಾಗೂ ಸೋಯಾಬೀನ ₹ 5,300 ದರ ಇದ್ದುದರಿಂದ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಲು ನೋಂದಣಿ ಮಾಡಲಾಗುತ್ತಿದೆ.
‘ಮುಂಗಾರಿನ ಬೆಳೆಗಳ ರಾಶಿ ಮುಗಿದ ತಕ್ಷಣ ಸರ್ಕಾರ ಆದಷ್ಟು ಬೇಗ ಖರೀದಿ ಕೇಂದ್ರ ತೆರೆಯಬೇಕು. ಸರಿಯಾದ ಸಮಯಕ್ಕೆ ಹೆಸರು. ಉದ್ದು ಮಾರಾಟ ಮಾಡದೆ ಹೋದರೆ ನಷ್ಟ ಅನುಭವಿಸಬೇಕಾಗುತ್ತದೆ‘ ಎನ್ನುತ್ತಾರೆ ಕಲ್ಲೇ ಗ್ರಾಮದ ರೈತ ಬಸನಗೌಡ ಪಾಟೀಲ.
‘ಬೆಳಿಗ್ಗೆ 8ಗಂಟೆಯಿಂದ ಸಂಜೆ 6ರ ವರೆಗೆ ನೋಂದಣಿ ಮಾಡಲಾಗುತ್ತದೆ. ಸರ್ವರ್ ಸಮಸ್ಯೆ ಉಂಟಾಗುತ್ತಿದ್ದು, ನೋಂದಣಿ ಮಾಡಲು ತಡವಾಗುತ್ತಿದೆ’ ಎಂದು ಪಿಕೆಪಿಎಸ್ ಸಿಬ್ಬಂದಿ ಮಹಮ್ಮದ ಸಲೀಂ ಖತೀಬ ತಿಳಿಸಿದರು.
ನೊಂದಣಿಗೆ 80 ದಿನಗಳ ಕಾಲಾವಕಾಶವಿದ್ದು. ರೈತರು ಬೆಂಬಲ ಬೆಲೆ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕುರಾಮಲಿಂಗಪ್ಪ ನವಲಗುಂದ ಅಧ್ಯಕ್ಷ ಪಿಕೆಪಿಎಸ್ ಉಪ್ಪಿನಬೆಟಗೇರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.