
ಪ್ರಜಾವಾಣಿ ವಾರ್ತೆತಡಸ: ವಲ್ಲಭ ಚೈತನ್ಯ ಮಹಾರಾಜರ 75ನೇ ಜಯಂತಿ ಪ್ರಯುಕ್ತ ಶ್ರೀ ಗಾಯತ್ರೀ ತಪೋಭೂಮಿ ಚಾರಿಟೇಬಲ್ ಟ್ರಸ್ಟ್ ಮತ್ತು ಚೈತನ್ಯ ಯುವ ಸಮಿತಿಯು ತಡಸದಲ್ಲಿ ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದೆ.
ಶಿಬಿರದಲ್ಲಿ 20ಕ್ಕೂ ಹೆಚ್ಚು ಯುವಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದ್ದಾರೆ. 250ಕ್ಕೂ ಹೆಚ್ಚು ರೋಗಿಗಳು ಮಧುಮೇಹ ,ರಕ್ತದ ಒತ್ತಡ, ಮಾನಸಿಕ ರೋಗ, ಕಣ್ಣು, ಇಸಿಜಿ ಸೇರಿದಂತೆ ಮುಂತಾದ ಕಾಯಿಲೆಗಳ ತಪಾಸಣೆಗೆ ಒಳಗಾಗಿ ಔಷಧಿ ಪಡೆದುಕೊಂಡರು.
ಹುಬ್ಬಳ್ಳಿ ಮತ್ತು ಹಾವೇರಿಯ ಪ್ರಮುಖ ವೈದ್ಯರು ಕಾರ್ಯಕ್ರಮದಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.