ADVERTISEMENT

ವಾಲ್ಮಿಗೆ ವಾಟ್ಸೇವ್ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 4:37 IST
Last Updated 11 ಸೆಪ್ಟೆಂಬರ್ 2024, 4:37 IST
ವಾಲ್ಮಿ ನಿರ್ದೇಶಕ ರಾಜೇಂದ್ರ ಪೋದ್ದಾರ
ವಾಲ್ಮಿ ನಿರ್ದೇಶಕ ರಾಜೇಂದ್ರ ಪೋದ್ದಾರ   

ಧಾರವಾಡ: ರಾಜ್ಯದ ಜಲ ಸಂಪನ್ಮೂಲ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಗೆ (ವಾಲ್ಮಿ) ಅಂತರರಾಷ್ಟ್ರೀಯ ನೀರಾವರಿ ಮತ್ತು ಒಳಚರಂಡಿ ಮಂಡಳಿ (ಐಸಿಐಡಿ) ಅವರಿಂದ ವಾಟ್ಸೇವ್-2024 ಪ್ರಶಸ್ತಿ ಲಭಿಸಿದೆ ಎಂದು ವಾಲ್ಮಿ ನಿರ್ದೇಶಕ ರಾಜೇಂದ್ರ ಪೋದ್ದಾರ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸೆ.3ರಂದು ನಡೆದ 9ನೇ ಏಷಿಯನ್ ಪ್ರಾದೇಶಿಕ ಸಮ್ಮೇಳನದಲ್ಲಿ ಐಸಿಐಡಿ ಅಧ್ಯಕ್ಷ ಮಾರ್ಕೊ ಆರ್ಸಿಯೆರಿ ಅವರಿಂದ ಪ್ರಶಸ್ತಿ ಸ್ವೀಕರಿಸಲಾಯಿತು ಎಂದರು.

ರಾಜ್ಯದಲ್ಲಿ ರೈತರ ಸಹಭಾಗಿತ್ವದ ನೀರಾವರಿ ಪದ್ಧತಿ ಅಳವಡಿಸುವಲ್ಲಿ ವಾಲ್ಮಿ ಸಂಸ್ಥೆಯು ಯಶಸ್ವಿಗೊಳಿಸಿದೆ. ಈ ಪದ್ಧತಿ ಅಡಿಯಲ್ಲಿ ಸಾವಿರಾರು ನೀರು ಬಳಕೆದಾರ ಸಹಕಾರಿ ಸಂಘಗಳನ್ನು ಸ್ಥಾಪಿಸಲಾಗಿದ್ದು, ಸುಸ್ಥಿರ ನೀರಾವರಿ ಸಾಧಿಸಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ವಾಲ್ಮಿಯು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಮೂಲಕ ಕಾಲುವೆ ಸ್ವಚ್ಛತೆ, ಸವಳು-ಜವಳು ನಿರ್ವಹಣೆ, ನೀರು ಬಳಕೆದಾರರ ಸಂಘಗಳ ಪುನಶ್ಚೇತನ, ಉಪಗ್ರಹ ಆಧಾರಿತ ಮೂಲಕ ತರಬೇತಿ ಆಯೋಜಿಸುತ್ತಿದ್ದು, ಇದರಿಂದ ರೈತರಲ್ಲಿ ವೈಜ್ಞಾನಿಕ ನೀರು ಮತ್ತು ಮಣ್ಣಿನ ನಿರ್ವಹಣೆ ಕಲ್ಪನೆ ಮೂಡಿದೆ ಎಂದರು.

ಭೀಮಾ ನಾಯ್ಕ, ಪ್ರಭಾಕರ ಹಾದಿಮನಿ, ಯೋಗೇಂದ್ರನಾಥ, ಬಸವರಾಜ ಪೂಜಾರ, ಸುವರ್ಣಾ ದೊಡಮನಿ, ಮಹದೇವಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.