ADVERTISEMENT

ಉಪ್ಪಿನಬೆಟಗೇರಿ|ಯುವಕರು ಧರ್ಮ, ದೇಶಾಭಿಮಾನ ಬೆಳೆಸಿಕೊಳ್ಳಿ: ವಿರೂಪಾಕ್ಷ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 10 ಮೇ 2025, 13:32 IST
Last Updated 10 ಮೇ 2025, 13:32 IST
ಉಪ್ಪಿನಬೆಟಗೇರಿ ಸಮೀಪದ ಹನುಮನಕೊಪ್ಪದಲ್ಲಿ ಆಂಜನೇಯಸ್ವಾಮಿ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ  ದೇವಸ್ಥಾನ ಲೋಕಾರ್ಪಣೆ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಆಧ್ಯಾತ್ಮಿಕ ಪ್ರವಚನ ಮಂಗಲ ಹಾಗೂ ಧರ್ಮಸಭೆಯಲ್ಲಿ ಮುರುಘೇಂದ್ರ ಸ್ವಾಮೀಜಿ ಮಾತನಾಡಿದರು 
ಉಪ್ಪಿನಬೆಟಗೇರಿ ಸಮೀಪದ ಹನುಮನಕೊಪ್ಪದಲ್ಲಿ ಆಂಜನೇಯಸ್ವಾಮಿ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ  ದೇವಸ್ಥಾನ ಲೋಕಾರ್ಪಣೆ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಆಧ್ಯಾತ್ಮಿಕ ಪ್ರವಚನ ಮಂಗಲ ಹಾಗೂ ಧರ್ಮಸಭೆಯಲ್ಲಿ ಮುರುಘೇಂದ್ರ ಸ್ವಾಮೀಜಿ ಮಾತನಾಡಿದರು    

ಉಪ್ಪಿನಬೆಟಗೇರಿ: ‘ಯುವಕರು, ಧರ್ಮ ಮತ್ತು ದೇಶಾಭಿಮಾನ ಬೆಳೆಸಿಕೊಳ್ಳಬೇಕು. ಇವೆರಡೂ ನಮ್ಮ ಕಣ್ಣುಗಳಿದ್ದಂತೆ’ ಎಂದು ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದರು.

ಸಮೀಪದ ಹನುಮನಕೊಪ್ಪದಲ್ಲಿ ಆಂಜನೇಯಸ್ವಾಮಿ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ನೂತನವಾಗಿ ನಿರ್ಮಿಸಿದ ದೇವಸ್ಥಾನ ಲೋಕಾರ್ಪಣೆ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಆಧ್ಯಾತ್ಮಿಕ ಪ್ರವಚನ ಮಂಗಲ ಹಾಗೂ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಜಾತ್ರೆ ಮತ್ತು ದೇವಸ್ಥಾನಗಳು ಭಾವೈಕ್ಯದ ಸಂಕೇತವಾಗಿವೆ ಎಂದರು

ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಮಠ, ಮಂದಿರಗಳಿಗೆ ತೆರಳುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುತ್ತದೆ ಎಂದು ಹೇಳಿದರು.

ADVERTISEMENT

ಖೇಡಗಿಯ ಪ್ರಭುದೇವರು ಮಾತನಾಡಿದರು. ಸಮಾಜ ಸೇವಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಬೆಳಿಗ್ಗೆ 4 ಗಂಟೆಗೆ ಹೊಂಡ ತುಂಬುವುದು, ನಂತರ ಅರ್ಚಕರಿಂದ ಚಂಡಿಕಾ ಹೋಮ, ಸ್ವಾಮೀಜಿಗಳ ನೇತೃತ್ವದಲ್ಲಿ ಕಳಸಾರೋಹಣ ನೆರವೇರಿಸಲಾಯಿತು. ಜ್ಯೋತಿಷಿ ಮಹಾದೇವಪ್ಪ ಅಷ್ಟಗಿ, ಅಮೃತ ದೇಸಾಯಿ, ಶ್ರೀಕಾಂತ ಅಷ್ಟಗಿ, ಹಸನಬೇಗ ಜೋರಮ್ಮನವರ, ಮಲ್ಲಣ್ಣ ಅಷ್ಟಗಿ, ಮಂಜುನಾಥ ಸಂಕಣ್ಣವರ, ದೇವೆಂದ್ರಪ್ಪ ಅಂಗಡಿ, ಚಂದ್ರನಾಥ ಅಷ್ಟಗಿ, ಕಾಶಪ್ಪ ದೊಡವಾಡ, ಎಸ್.ಕೆ.ಕೊಡಿ, ನಾಗಪ್ಪ ಹಾರೋಬೆಳವಡಿ, ಮಹಾದೇವಪ್ಪ ಶಿರೂರ, ಧರೇಪ್ಪ ಬೊಬ್ಬಿ, ದೇವೆಂದ್ರಪ್ಪ ಜಾಧವ, ಬಸವರಾಜ ಕಮ್ಮಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.