ರೋಣ: ಪರಿಸರಕ್ಕೆ ಹಾನಿ ಉಂಟುಮಾಡುವ, ಮಾಲಿನ್ಯಕ್ಕೆ ಕಾರಣವಾಗುವ ಘನತ್ಯಾಜ್ಯವನ್ನು ನಿರ್ವಹಣೆ ಮಾಡುವ ಸ್ಥಳೀಯ ಆಡಳಿತ ಸಂಸ್ಥೆಗಳ ಕ್ರಮಕ್ಕೆ ನಾಗರಿಕರು ಸಹಕಾರ ನೀಡಬೇಕು ಎಂದು ಕೆಆರ್‌ಡಿಸಿಎಲ್ ಅಧ್ಯಕ್ಷ ಶಾಸಕ ಕಳಕಪ್ಪ ಬಂಡಿ ಮನವಿ ಮಾಡಿದರು.
ಶನಿವಾರ ಇಲ್ಲಿಯ ತಾ.ಪಂ. ಸಭಾಭವನದಲ್ಲಿ ಜರುಗಿದ ಘನತ್ಯಾಜ್ಯ ಹಾಗೂ ಜೀವತ್ಯಾಜ್ಯ ನಿರ್ವಹಣೆ ಕುರಿತ ಮಾಹಿತಿ ವಿನಿಮಯ ಸಭೆಯಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನ ರೋಣ, ಗಜೇಂದ್ರಗಡ ಪುರಸಭೆ ನರೇಗಲ್ಲ ಪ.ಪಂ. ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ಮೀಸಲು ಇಟ್ಟ ಜಮೀನಿನಲ್ಲಿ 1ಎಕರೆ ಜಮೀನನ್ನು ಜೀವತ್ಯಾಜ್ಯ ನಿರ್ವಹಣೆ ಉದ್ದೇಶಕ್ಕಾಗಿ ಬಿಟ್ಟುಕೊಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರಿಸರ ಅಧಿಕಾರಿ ಡಾ.ಬಿ. ರುದ್ರೇಶ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಜೀವತ್ಯಾಜ್ಯ ನಿರ್ವಹಣೆ ಸಮಸ್ಯೆ ಉಂಟಾಗಿದೆ ಎಂದರು.
ಇದನ್ನು ಸಮರ್ಪಕವಾಗಿ ನಿರ್ವಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ತ್ಯಾಜ್ಯ ನಿರ್ವಹಣೆಗೆ ಸೂತ್ರಗಳನ್ನು ಪ್ರಕಟಿಸಿದ್ದು, ಆ ಸೂತ್ರಗಳ ಅನ್ವಯ ತ್ಯಾಜ್ಯ ನಿರ್ವಹಣೆಗೆ ಮುಂದಾಗಬೇಕು ಎಂದರು.
ತಾಲ್ಲೂಕು ಐ.ಎಂ.ಎ. ಅಧ್ಯಕ್ಷ ಡಾ. ಎಸ್.ಬಿ. ಲಕ್ಕೋಳ ಮಾತನಾಡಿದರು. ಡಾ. ಚನ್ನಶೆಟ್ಟಿ ಡಾ.ವಿ.ಎಸ್. ಕಂಬಳ್ಯಾಳ, ಡಾ.ಜಿ.ಕೆ.ಕಾಳೆ, ಡಾ. ಆರ್.ಜಿ. ಮಲ್ಲಾಪೂರ, ಡಾ.ಎಲ್. ಡಿ. ಬಾಕಳೆ, ಡಾ. ಕೊಟ್ಟೂರಶಟ್ರ, ಡಾ.ಭಜಂತ್ರಿ, ಡಾ.ಗಿರಡಿ, ತಾಲ್ಲೂಕಿನ ವೈದ್ಯರು, ವಿ.ಕೆ.ಕಾಳಪ್ಪನವರ, ಬಿ.ಆರ್. ಗಂಗಾಧರ, ಗುರುರಾಜ, ಮುತ್ತಣ್ಣ ಲಿಂಗನಗೌಡ್ರ, ಶಿವಕುಮಾರ, ಶಿವಕುಮಾರ, ರೋಣ, ನರೇಗಲ್ಲ ಗಜೇಂದ್ರಗಡ ಮುಖ್ಯಾಧಿಕಾರಿಗಳಾದ ಆರ್.ಎಂ. ಕೊಡಗೆ, ಶೇಖರ ಸಂಗಟಿ, ಹೊಸಮನಿ ಮುಂತಾದವರು ಹಾಜರಿದ್ದರು. ರಂಜನಗಿ ನಿರೂಪಿಸಿದರು. ಡಾ.ರಮೇಶ ದಿವಗಿಹಾಳ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.