ADVERTISEMENT

ಪ್ರಯಾಣ ದರ ಏರಿಕೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 10:23 IST
Last Updated 19 ಜೂನ್ 2013, 10:23 IST

ಗಜೇಂದ್ರಗಡ: ಕಾಂಗ್ರೆಸ್ ಸರ್ಕಾರ ಸಾರಿಗೆ ಬಸ್ ದರ ಏರಿಕೆ ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐಎಂ) ಕಾರ್ಯಕರ್ತರು ನಗರದ ಕಾಲಕಾಲೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ಪ್ರತಿಕೃತಿ ದಹಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡ ಎಂ.ಎಸ್.ಹಡಪದ ಮಾತನಾಡಿ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಅಗ್ಗದ ಅಕ್ಕಿ, ಗುಟ್ಕಾ ನಿಷೇಧದಂತಹ ಜನಾಕರ್ಷಕ ಯೋಜನೆಗಳನ್ನು ಪ್ರಕಟಿಸಿ ಜನ ಮೆಚ್ಚುಗೆ ಪಡೆದಿದ್ದ ಕಾಂಗ್ರೆಸ್ ಸರ್ಕಾರದ ಇನ್ನೊಂದು ಮುಖ ಸಾರಿಗೆ ಬಸ್ ದರ ಏರಿಕೆಯಲ್ಲಿ ಬಯಲಾಗಿದೆ. ರಾಜ್ಯ ರಸ್ತೆ ಸಾರಿಗೆ ನಿಗಮದ ಎಲ್ಲ ವಿಭಾಗಗಳ ಪ್ರಯಾಣ ದರವನ್ನು ಶೇ.10.50ರಷ್ಟು ಮತ್ತು ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಪ್ರಯಾಣ ದರವನ್ನು ಶೇ.16ರಷ್ಟು ಏರಿಕೆ ಮಾಡಿರುವ ಸರ್ಕಾರ, ಈಗಾ ಗಲೇ ಅಗತ್ಯ ವಸ್ತುಗಳ ಬೆಲೆ ಏರಿ ೆಯಿಂದಾಗಿ ಬಸವಳಿದ ಶ್ರೀಸಾಮಾನ್ಯರ ಗಾಯದ ಮೇಲೆ ಬರ ಎಳೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಸಾರಿಗೆ ದರದ ಏರಿಕೆ ಕ್ರಮ ಕೆ.ಎಸ್.ಆರ್.ಟಿ.ಸಿ ಮತ್ತು ಬಿ.ಎಂ.ಟಿ.ಸಿ ಇತಿಹಾಸದಲ್ಲಿಯೇ ಅಧಿಕ ವಾಗಿದೆ.  ಸಾರಿಗೆ ನಿಗಮಗಳಿಗೆ ಡೀಸೆಲ್ ಬೆಲೆ ಏರಿಕೆಯಿಂದಾಗಿ ಉಂಟಾಗುತ್ತಿ ರುವ ಆರ್ಥಿಕ ಹೊರೆಯನ್ನು ಜನ ಸಾಮಾನ್ಯರ ಮೇಲೆ ಹೇರುವ ಬದಲು
ರಾಜ್ಯ ಸರ್ಕಾರ ಸಾರಿಗೆ ನಿಗಮಗಳಿಗೆ ಅಗತ್ಯ ಸಬ್ಸಿಡಿ ನೀಡಬೇಕು. ಸೇವೆ ಒದಗಿಸುವ ನೆಪದಲ್ಲಿ ಲಾಭವೊಂದನ್ನೇ ಗುರಿಯಾಗಿಸಿಕೊಳ್ಳಬಾರದು.

ರಾಜ್ಯದ ಸಾರಿಗೆ ನಿಗಮಗಳಲ್ಲಿ ಹಿಂದೆಂದೂ ಏರಿಕೆ ಯಾಗದಷ್ಟು ಸಾರಿಗೆ ದರ ಏರಿಕೆ ಯಾಗಿರುವುದು ನಿರಂತರ ಬರದಿಂದ ತತ್ತರಿಸಿ ಹೋಗಿರುವ ರಾಜ್ಯದ ಜನತೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸರ್ಕಾರದ ಇಂತಹ ಬೆಲೆ ಏರಿಕೆ ಕ್ರಮದಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ತಪ್ಪಿಗಾಗಿ ಜನತೆ ಕೈಕೈಹಿಸುಕಿಕೊಳ್ಳುವಂತಾಗಿದೆ ಎಂದು ವ್ಯಂಗ್ಯವಾಡಿದರು.

ಬಸವರಾಜ ಶೀಲವಂತರ ಮಾತ ನಾಡಿದರು. ಮಾರುತಿ ಚಿಟಗಿ, ಕಳಕೇಶ ಉಕ್ಕಿಸಲ, ಬಸವರಾಜ ತಿರಕೋಜಿ, ಎಂ.ಬಿ.ಸೋಂಪೂರ, ಶ್ರೀಕಾಂತ ದತ್ತಾ ತ್ರೇಯ, ರಂಜಾನಸಾಬ ಸಂಕನೂರ, ಶಿವಾನಂದ ಬೋಸಲೆ, ಕಳಕಪ್ಪ ಗುರಿ ಕಾರ, ಬಾಳು ತಿರಕೋಜಿ, ಜಗದೀಶ ಕಪ್ಪಲಿ, ಎಚ್ಚರಪ್ಪ ಬಡಿಗೇರ ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.