ADVERTISEMENT

ಪಂಡಿತ್‌ ಪುಟ್ಟರಾಜ ಗವಾಯಿಗಳ 111ನೇ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2025, 15:41 IST
Last Updated 25 ಫೆಬ್ರುವರಿ 2025, 15:41 IST
ಪುಟ್ಟರಾಜ ಗವಾಯಿ
ಪುಟ್ಟರಾಜ ಗವಾಯಿ   

ಗದಗ: ನಗರದ ಡಾ. ವಿ.ಬಿ. ಹಿರೇಮಠ ಮೆಮೊರಿಯಲ್ ಪ್ರತಿಷ್ಠಾನ ಹಾಗೂ ಅಶ್ವಿನಿ ಪ್ರಕಾಶನದ ವತಿಯಿಂದ ಪಂಡಿತ್‌ ಪುಟ್ಟರಾಜ ಗವಾಯಿಗಳವರ 111ನೇ ಜಯಂತ್ಯುತ್ಸವದ ನಿಮಿತ್ತ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ, ಕವಿಗೋಷ್ಠಿ ಮತ್ತು ಶ್ರೀಗಳಿಗೆ ತುಲಾಭಾರ ಕಾರ್ಯಕ್ರಮ ಮಾರ್ಚ್‌ 3ರಂದು ನಡೆಯಲಿದೆ. 

ಕಳಸಾಪುರ ರಸ್ತೆಯ ಸಾಯಿ ಜ್ಞಾನಯೋಗಾಶ್ರಮ ಎದುರಿಗೆ ಇರುವ ರಾಜಲಕ್ಷ್ಮಿ ನಿಲಯದಲ್ಲಿ ಕಾರ್ಯಕ್ರಮ ನಡೆಯಲಿದೆ. ನರಸಾಪುರ ಗದಗ-ಬೆಟಗೇರಿ ಅನ್ನದಾನೇಶ್ವರ ಸಂಸ್ಥಾನ ಶಾಖಾಮಠದ ವೀರೇಶ್ವರ ಶಿವಯೋಗಿಗಳು ಸಾನ್ನಿಧ್ಯ ವಹಿಸುವರು. ಪಂಡಿತ್ ರಾಜಗುರು ಗುರುಸ್ವಾಮಿ ಕಲಕೇರಿ ಕಾರ್ಯಕ್ರಮ ಉದ್ಘಾಟಿಸುವರು. ಪ್ರತಿಷ್ಠಾನದ ಅಧ್ಯಕ್ಷೆ ವಿ.ವಿ. ಹಿರೇಮಠ ಅಧ್ಯಕ್ಷತೆ ವಹಿಸುವರು.

ಮಲ್ಲಿಕಾರ್ಜುನ ಗದಿಗಯ್ಯಾ, ಭೃಂಗಿಮಠ ದಂಡೋತಿ, ಶರಣಬಸವ ಎನ್. ವೆಂಕಟಾಪುರ, ಡಾ. ರಶ್ಮಿ ಅಂಗಡಿ, ವೀರಯ್ಯ ಹೊಸಮಠ, ನಾರಾಯಣ ವೀರಪ್ಪ ಹಿರೇಕೊಳಚಿ, ಮಹೇಶ ವಡ್ಡಿನ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷರಾದ ಪುಟ್ಟರಾಜ ಹಿರೇಮಠ, ಸುಷ್ಮಾ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.