ADVERTISEMENT

ಗದಗ ಜಿಲ್ಲೆಗೆ ಕೊರೊನಾ ಗ್ರಹಣ: ಒಂದೇ ದಿನ 18 ಪ್ರಕರಣ

ಸೋಂಕಿತರ ಸಂಪರ್ಕದಿಂದಲೇ ಹೆಚ್ಚುತ್ತಿರುವ ಪ್ರಕರಣ; ಆತಂಕ

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 15:04 IST
Last Updated 21 ಜೂನ್ 2020, 15:04 IST
ಕೊರೊನಾ ಸೋಂಕು ದೃಢಪಟ್ಟ ಬೆನ್ನಲ್ಲೇ, ಶಿರಹಟ್ಟಿ ಪಟ್ಟಣದ ಮಟ್ಟಿಭಾವಿ ಪ್ಲಾಟ್‌ಗೆ ಸಂಪರ್ಕ ಕಲ್ಪಿಸುವ ಎಲ್ಲಾ ಮಾರ್ಗಗಳನ್ನು  ಪಟ್ಟಣ ಪಂಚಾಯ್ತಿ ಸಿಬ್ಬಂದಿ ಮುಳ್ಳಿನ ಬೇಲಿ ಹಾಕಿ ಬಂದ್‌ ಮಾಡಿದ್ದಾರೆ
ಕೊರೊನಾ ಸೋಂಕು ದೃಢಪಟ್ಟ ಬೆನ್ನಲ್ಲೇ, ಶಿರಹಟ್ಟಿ ಪಟ್ಟಣದ ಮಟ್ಟಿಭಾವಿ ಪ್ಲಾಟ್‌ಗೆ ಸಂಪರ್ಕ ಕಲ್ಪಿಸುವ ಎಲ್ಲಾ ಮಾರ್ಗಗಳನ್ನು  ಪಟ್ಟಣ ಪಂಚಾಯ್ತಿ ಸಿಬ್ಬಂದಿ ಮುಳ್ಳಿನ ಬೇಲಿ ಹಾಕಿ ಬಂದ್‌ ಮಾಡಿದ್ದಾರೆ   

ಗದಗ: ಭಾನುವಾರ ಜಿಲ್ಲೆಯ ಪಾಲಿಗೆ ಕಂಕಣ ಸೂರ್ಯಗ್ರಹಣ ಮಾತ್ರವಲ್ಲ, ಕೊರೊನಾ ಗ್ರಹಣದ ದಿನವೂ ಆಗಿ ಬದಲಾಯಿತು. ಒಂದೇ ದಿನ 18 ಪಾಸಿಟಿವ್‌ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿವೆ.

ನಾಲ್ಕು ಮಂದಿ ಸೋಂಕಿತರ ಸಂಪರ್ಕದಿಂದ ಒಟ್ಟು 14 ಮಂದಿಗೆ ಸೋಂಕು ದೃಢಪಟ್ಟಿದೆ. ಇನ್ನುಳಿದ ನಾಲ್ಕು ಪ್ರಕರಣಗಳು ಹೊಸತು.ಇದರ ಮೂಲ ಹುಡುಕಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ. ಭಾನುವಾರದ ಪ್ರಕರಣಗಳೂ ಸೇರಿ ಜಿಲ್ಲೆಯಲ್ಲಿ ವರದಿಯಾದ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 78ಕ್ಕೆ ಏರಿಕೆಯಾಗಿದೆ.

ಜಿಲ್ಲಾಕೇಂದ್ರಕ್ಕೆ ಮಾತ್ರ ಸೀಮಿತವಾಗಿದ್ದ ಕೊರೊನಾ ಪ್ರಕರಣ ಈಗ ತಾಲ್ಲೂಕುಗಳಿಗೂ ವಿಸ್ತರಿಸಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಒಂದೆಡೆ ಸೋಂಕಿತರ ಸಂಪರ್ಕದಿಂದ ಜನರಿಗೆ ಸೋಂಕು ಹರಡುತ್ತಿದ್ದರೆ, ಇನ್ನೊಂದೆಡೆ ಯಾವುದೇ ದೇಶೀಯ, ಅಂತರರಾಷ್ಟ್ರೀಯ ಪ್ರಯಾಣದ ಇತಿಹಾಸ ಇಲ್ಲದ, ಮನೆಯಲ್ಲೇ ಇರುವ ವ್ಯಕ್ತಿಗಳಲ್ಲಿ ಸೋಂಕು ಕಾಣಿಸಿಕೊಂಡಿರುವುದು ಕಳವಳಕ್ಕೆ ಕಾರಣವಾಗಿದೆ.

ADVERTISEMENT

ಭಾನುವಾರ ಗದಗ ತಾಲ್ಲೂಕಿನ ಕೋಟುಮಚಗಿ ಗ್ರಾಮದ ಪಿ–7389 ಸಂಪರ್ಕದಿಂದ 6 ಮಂದಿಗೆ, (27 ವರ್ಷದ ಯುವಕ (ಪಿ-8727) 28 ವರ್ಷದ ಮಹಿಳೆ (ಪಿ-8728) 53 ವರ್ಷದ ಮಹಿಳೆ (ಪಿ-8729) 06 ವರ್ಷದ ಬಾಲಕ (ಪಿ-8730) 31 ವರ್ಷದ ಮಹಿಳೆ (ಪಿ-8731) 55 ವರ್ಷದ ಪುರುಷ (ಪಿ-8732) ಇವರಲ್ಲಿ ಸೋಂಕು ದೃಢಪಟ್ಟಿದೆ.

ಮುಂಬೈನಿಂದ ಜಿಲ್ಲೆಗೆ ಬಂದಿದ್ದ ಸೆಟಲ್‌ಮೆಂಟ್‌ ಪ್ರದೇಶದ ಪಿ-7387, ಹಾಗೂ ಪಿ-7388 ಇವರಿಗೆ ಜೂ.16ರಂದು ಸೋಂಕು ದೃಢಪಟ್ಟಿತ್ತು. ಇವರ ಸಂಪರ್ಕಿಂದ 6 ಮಂದಿಗೆ ಸೋಂಕು ದೃಢಪಟ್ಟಿದೆ. ಇವರಲ್ಲಿ 24 ವರ್ಷದ ಪುರುಷ (ಪಿ-8733) 21 ವರ್ಷದ ಮಹಿಳೆ (ಪಿ-8734), 33 ವರ್ಷದ ಪುರುಷ (ಪಿ-8735), 68 ವರ್ಷದ ವೃದ್ಧೆ (ಪಿ-8736) 6 ವರ್ಷದ ಬಾಲಕಿ (ಪಿ-8737) 31 ವರ್ಷದ ಪುರುಷ (ಪಿ-8738) ಸೇರಿದ್ದಾರೆ.
ಪಿ–7386 ಸಂಪರ್ಕದಿಂದ ಇಬ್ಬರಿಗೆ ಸೋಂಕು ತಗುಲಿದೆ. ಇವರಲ್ಲಿ 12 ವರ್ಷದ ಬಾಲಕ (ಪಿ-8739) ಮತ್ತು 5 ವರ್ಷದ ಗಂಡು ಮಗು (ಪಿ-8740) ಸೇರಿದೆ.

ಜ್ವರದಿಂದ ಬಳಲುತ್ತಿದ್ದ ಶಿರಹಟ್ಟಿ ಪಟ್ಟಣದ 35 ವರ್ಷದ ಪುರುಷ (ಪಿ–8724), ಶಿರಹಟ್ಟಿ ತಾಲ್ಲೂಕಿನ ಮಜ್ಜೂರು ತಾಂಡಾದ 29 ವರ್ಷದ ಮಹಿಳೆ (ಪಿ–8723) ರೋಣ ತಾಲ್ಲೂಕಿನ ಕುರಡಗಿ ಗ್ರಾಮದ 75 ವರ್ಷದ ವೃದ್ಧೆಯಲ್ಲಿ (ಪಿ-8726 ) ಮತ್ತು ಗದಗ ಎಸ್.ಎಂ.ಕೃಷ್ಣ ನಗರದ 65 ವರ್ಷದ ಪುರುಷ (ಪಿ–8725) ಇವರಿಗೆ ಸೋಂಕು ಕಾಣಿಸಿಕೊಂಡಿದೆ. ಗಂಟಲು ದ್ರವದ ಪರೀಕ್ಷೆ ವೇಳೆ ಸೋಂಕು ದೃಢಪಟ್ಟಿದ್ದು, ಸೋಂಕಿತರನ್ನು ಜಿಲ್ಲಾ ಕೇಂದ್ರದ ಕೋವಿಡ್‌–19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.