ADVERTISEMENT

ಬೊಮ್ಮಾಯಿ ಕೊಡುಗೆ ಶೂನ್ಯ: ಬಿಜೆಪಿಗೆ ಸೋಲಿನ ಭಯ; ಶಾಸಕ ಜಿ.ಎಸ್.ಪಾಟೀಲ

​ಪ್ರಜಾವಾಣಿ ವಾರ್ತೆ
Published 3 ಮೇ 2024, 13:56 IST
Last Updated 3 ಮೇ 2024, 13:56 IST
ಡಂಬಳ ಹೋಬಳಿಯ ಅತ್ತಿಕಟ್ಟಿ ಗ್ರಾಮದಲ್ಲಿ ಹಾವೇರಿ–ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪರವಾಗಿ ಶುಕ್ರವಾರ ಪ್ರಚಾರ ಕೈಗೊಂಡಿದ್ದ ಶಾಸಕ ಜಿ.ಎಸ್.ಪಾಟೀಲ ಸಮ್ಮುಖದಲ್ಲಿ ಕೆಲವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು
ಡಂಬಳ ಹೋಬಳಿಯ ಅತ್ತಿಕಟ್ಟಿ ಗ್ರಾಮದಲ್ಲಿ ಹಾವೇರಿ–ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪರವಾಗಿ ಶುಕ್ರವಾರ ಪ್ರಚಾರ ಕೈಗೊಂಡಿದ್ದ ಶಾಸಕ ಜಿ.ಎಸ್.ಪಾಟೀಲ ಸಮ್ಮುಖದಲ್ಲಿ ಕೆಲವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು   

ಡಂಬಳ: ದೇಶದಲ್ಲಿ ಕಳೆದ 75 ವರ್ಷಗಳಿಂದ ಎಲ್ಲಾ ಜಾತಿ ಧರ್ಮದವರು ಸಹೋದರರಂತೆ ಉತ್ತಮವಾಗಿ ಜೀವನ ಕಳೆಯುತ್ತಿದ್ದಾರೆ. ಆದರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುವ ಉದ್ದೇಶ ಹೊಂದಿರುವ ಕೋಮವಾದಿ ಬಿಜೆಪಿ ಪಕ್ಷವನ್ನು ಮತದಾರರು ತಿರಸ್ಕಾರ ಮಾಡಬೇಕು ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.

ಡಂಬಳ ಹೋಬಳಿ ರೋಣ ಮತಕ್ಷೇತ್ರದ ಅತ್ತಿಕಟ್ಟಿ, ದಿಂಡೂರ, ಡೋಣಿತಾಂಡ, ಶಿಂಗಟರಾಯನಕೇರಿತಾಂಡ, ಕದಾಂಪೂರ, ಚುರ್ಚಿಹಾಳ ಗ್ರಾಮಗಳಲ್ಲಿ ಹಾವೇರಿ–ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪರವಾಗಿ ಶುಕ್ರವಾರ ಮತಯಾಚನೆ ಮಾಡಿ ಮಾತನಾಡಿದರು.

ಪಕ್ಷದ ಗ್ಯಾರಂಟಿ ಯೋಜನೆಗಳಿಂದ ಜನರು ಬದುಕು ಸುಧಾರಣೆಯಾಗಿದೆ. ಗ್ಯಾರಂಟಿ ಯೋಜನೆಗಳ ಸಹಾಯಧನ ಪ್ರತಿಯೊಬ್ಬರಿಗೂ ನೇರವಾಗಿ ತಲುಪುತ್ತಿದೆ. ದೇಶದಲ್ಲಿ ಮೋದಿ ಆಡಳಿತ ವಿರೋಧಿ ಅಲೆ ಇದ್ದು ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಬಡಕುಟುಂಬದ ಮಹಿಳೆಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ, ಕೇಂದ್ರ ಸರ್ಕಾರದ ಹೊಸ ನೇಮಕಾತಿಗಳಲ್ಲಿ ಅರ್ಧ ಮಹಿಳೆಯರಿಗೆ ಮೀಸಲು, ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ, ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನೀಡುವುದು ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದರು.

ADVERTISEMENT

ಕೋಮವಾದಿ ಜಾತಿವಾದಿ ಬಿಜೆಪಿ ಸಂವಿಧಾನ ವಿರೋಧಿ ಆಗಿದ್ದು ದೇಶದ ಹಿತದೃಷ್ಠಿಯಿಂದ ಪ್ರತಿಯೊಬ್ಬರು ತಮ್ಮ ಅಮೂಲ್ಯವನ್ನು ಕಾಂಗ್ರೆಸ್ ಪಕ್ಷದ ಗುರುತಿಗೆ ನೀಡಬೇಕು ಎಂದು ಮನವಿ ಮಾಡಿದರು.

ಮುಖಂಡ ವಿ.ಬಿ.ಸೋಮನಕಟ್ಟಿಮಠ, ಶಂಕ್ರಪ್ಪ ಲಮಾಣಿ, ಶಾಂತಮ್ಮ ಕಾರಭಾರಿ,ರಮೇಶ ಪವಾರ,ವಿ.ಎಸ್.ಯರಾಶಿ, ಜಂತ್ರೆಮ್ಮ ನಾಯಕ, ರಾಮಣ್ಣ ಮೇಗಳಮನಿ, ರಮೇಶ ಪವಾರ, ಗೋಣಿಬಸಪ್ಪ ಎಸ್ ಕೊರ್ಲಹಳ್ಳಿ, ಬಸವರಡ್ಡಿ ಬಂಡಿಹಾಳ, ಮರಿಯಪ್ಪ ಸಿದ್ದಣ್ಣವರ, ಕುಬೇರ ನಾಯಕ, ಗೋಪಾಲ ಚವ್ಹಾಣ, ಅಜ್ಜೆಪ್ಪ ರಾಠೋಡ, ಮಹಾಂತೇಶ ಚವ್ಹಾಣ, ಬಸವರಾಜ ಪೂಜಾರ, ಸುರೇಶ ಗಡಗಿ, ಬಾಬುಸಾಬ್ ಮೂಲಿಮನಿ, ಶರಣು ಬಂಡಿಹಾಳ, ಜಾಕೀರ ಮೂಲಿಮನಿ, ವಿ.ಎಂ.ಪಾಟೀಲ, ಮುತ್ತಣ್ಣ ಕೊಂತಿಕಲ್, ಮಲ್ಲಿಕಾರ್ಜುನ ಪ್ಯಾಟಿ, ಮುದಿಯಪ್ಪ ಗದಗಿನ ಮತ್ತಿತರರು ಇದ್ದರು.

ಡಂಬಳ ಹೋಬಳಿ ದಿಂಡೂರ ಗ್ರಾಮದಲ್ಲಿ ಶಾಸಕ ಜಿ.ಎಸ್.ಪಾಟೀಲ ಅವರು ಮಹಿಳೆಯರಿಗೆ ಶುಕ್ರವಾರ ಗ್ಯಾರಂಟಿ ಕಾರ್ಡುಗಳನ್ನು ವಿತರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.