ADVERTISEMENT

ಗದಗ | ಗ್ರಾ.ಪಂ ಹಂತದಲ್ಲಿ ಉತ್ತಮ ಸೇವೆ ನೀಡಿ: ತಾ.ಪಂ ಇಒ ಮಲ್ಲಯ್ಯ ಕೊರವನವರ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 4:10 IST
Last Updated 27 ಡಿಸೆಂಬರ್ 2025, 4:10 IST
ಗದಗ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಕಂಪ್ಯೂಟರ್‌ ಆಪರೇಟರ್‌ಗಳ ದಿನ ಆಚರಿಸಲಾಯಿತು
ಗದಗ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಕಂಪ್ಯೂಟರ್‌ ಆಪರೇಟರ್‌ಗಳ ದಿನ ಆಚರಿಸಲಾಯಿತು   

ಗದಗ: ‘ನರೇಗಾ ಯೋಜನೆ ಜಾರಿ ಆದಾಗಿನಿಂದ ಎಲ್ಲವೂ ಆನ್​ಲೈನ್​ ಆಗಿವೆ. ಜನರಿಗೆ ಗ್ರಾಮ ಪಂಚಾಯಿತಿ ಹಂತದ ಕಂಪ್ಯೂಟರ್​ ಆಪರೇಟರ್‌ಗಳ ಸೇವೆ ಅತ್ಯವಶ್ಯವಿದ್ದು, ಉತ್ತಮವಾಗಿ ಕೆಲಸ ಮಾಡಿ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಯ್ಯ ಕೊರವನವರ ಹೇಳಿದರು.

ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಶುಕ್ರವಾರ ನಡೆದ ಕಂಪ್ಯೂಟರ್​ ಆಪರೇಟರ್​ಗಳ ದಿನಾಚರಣೆಯಲ್ಲಿ ಮಾತನಾಡಿದರು.

‘ಚಾರ್ಲ್ಸ್​ ಬ್ಯಾಬೇಜ್​ ಕಂಪ್ಯೂಟರ್‌ನ​ ಪಿತಾಮಹ. ಅವರ ಜನ್ಮದಿನವನ್ನು ಕಂಪ್ಯೂಟರ್​ ಆಪರೇಟರ್​ಗಳ ದಿನವಾಗಿ ಆಚರಿಸಲಾಗುತ್ತಿದೆ. ಸರ್ಕಾರದ ಎಲ್ಲ ಸೇವೆಗಳು ಗಣಕೀಕೃತವಾಗಿವೆ. ಗ್ರಾಮ ಪಂಚಾಯಿತಿ ಹಂತದ ಕಂಪ್ಯೂಟರ್​ ಆಪರೇಟರ್‌ಗಳ ಶ್ರಮವಹಿಸಿ ದುಡಿಯುತ್ತಿದ್ದು, ಅವರ ಕಾರ್ಯ ಶ್ಲಾಘನೀಯ’ ಎಂದರು.

ADVERTISEMENT

‘ಗ್ರಾಮ ಪಂಚಾಯಿತಿಯ ಆನ್‌ಲೈನ್‌ ಸೇವೆಗಳನ್ನು ಕಂಪ್ಯೂಟರ್‌ ಆಪರೇಟರ್​ಗಳು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಇದರಿಂಧ ಸಕಾಲಕ್ಕೆ ಜನರಿಗೆ ಸೇವೆ ಒದಗಿಸಲು ಸಾಧ್ಯವಾಗಿದೆ. ಈ ಮೊದಲು ಬರವಣಿಗೆ ರೂಪದಲ್ಲಿ ದಾಖಲೆಗಳ ರಚನೆ, ಸಂಗ್ರಹದಲ್ಲಿ ಉಂಟಾಗುತ್ತಿದ್ದ ಸಮಸ್ಯೆ ಇಂದಿಗಿಲ್ಲ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಚಾರ್ಲ್ಸ್​ ಬ್ಯಾಬೇಜ್​ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ದಯಾನಂದ ಕಟಿಗ್ಗಾರ, ಜೇಮ್ಸ್ ಮಾಣಿಕ್ಯಂ, ಹನುಮಂತಪ್ಪ ದಾಸರ, ಡಿಇಒಗಳಾದ ಮಂಜುನಾಥ ಹೊಂಬಳಮಠ, ಪರಮೇಶ್ವರಪ್ಪ ಬಡಿಗೇರ, ಭರಮಗೌಡ ಚಿಕ್ಕನಗೌಡ್ರ, ಜಗದೀಶ ಸತ್ಯಪ್ಪನವರ, ಶಾರದಾ ಹುನಗುಂದ, ರುಕ್ಮೀನಿ ಕೌಜಗೇರಿ, ನೀಲಮ್ಮ ಬರದ್ವಾಡ, ಅಕ್ಕಮ್ಮ ಜಗ್ಗಲ್ಲ, ಸಂತೋಷ ತಳವಾರ, ವೀರೇಶ ಅಬ್ಬಿಗೇರಿ, ರಾಘವೇಂದ್ರ ಜೋಶಿ ಇದ್ದರು. 

Highlights - ಚಾರ್ಲ್ಸ್​ ಬ್ಯಾಬೇಜ್​ ಭಾವಚಿತ್ರಕ್ಕೆ ಪುಷ್ಪನಮನ ಕಂಪ್ಯೂಟರ್‌ ಪಿತಾಮಹನ ಸಾಧನೆ ಸ್ಮರಣೆ ಗ್ರಾ.ಪಂ ಕಂಪ್ಯೂಟರ್‌ ಆಪರೇಟರ್‌ಗಳ ಕೆಲಸಕ್ಕೆ ಶ್ಲಾಘನೆ

Quote - ಕಂಪ್ಯೂಟರ್‌ ಆಪರೇಟರ್‌ಗಳು ಉತ್ತಮವಾಗಿ ಕೆಲಸ ಮಾಡುವುದರಿಂದ ಯೋಜನೆಗಳು ಪ್ರಗತಿಯತ್ತ ಸಾಗುತ್ತಿವೆ. ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿದರೆ ಅಭಿವೃದ್ಧಿ ಸಾಧ್ಯ ಕುಮಾರ ಪೂಜಾರ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ (ಉದ್ಯೋಗ ಖಾತ್ರಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.