ಮುಂಡರಗಿ: ತಾಲ್ಲೂಕಿನ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬೃಹತ್ ಕಾಲುವೆಗಳ ಬಸಿ ನೀರಿನಿಂದ ಹಾನಿಯಾದ ರೈತರ ಜಮೀನುಗಳಿಗೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ಡಂಬಳ ಹೋಬಳಿಯ ವಿವಿಧ ಗ್ರಾಮಗಳ ಮಾರ್ಗವಾಗಿ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಕಾಲುವೆಗಳು ಹಾಯ್ದು ಹೋಗಿವೆ. ಕಾಲುವೆಯ ಮೂಲಕ ನಿರಂತರವಾಗಿ ಬಸಿ ನೀರು ಹರಿಯುತ್ತಿದ್ದು, ಇದರಿಂದ ರೈತರ ಫಲವತ್ತಾದ ಜಮೀನು ಹಾಗೂ ಬೆಳೆಹಾನಿ ಆಗುತ್ತಲಿದ್ದು, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಗ್ರಾಮಗಳ ರೈತರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ರೈತರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಬಿ.ಎನ್. ಶ್ರೀಧರ ಅವರು ರೈತರ ಜಮೀನುಗಳನ್ನು ಪರಿಶೀಲಿಸಿ, ‘ಜಮೀನು ಹಾಗೂ ಬೆಳೆಹಾನಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ನಿಯಮಾನುಸಾರ ಕ್ರಮ ಕೈಹೊಳ್ಳಲಾಗುವುದು’ ಎಂದು ರೈತರಿಗೆ ಭರವಸೆ ನೀಡಿದರು.
ತಹಶೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ, ಶಿಂಗಟಾಲೂರ ಏತ ನೀರಾವರಿ ಯೋಜನೆಯ ಇಂಜಿನಿಯರ್ ರಾಘವೇಂದ್ರ ಎಚ್.ಸಿ., ಬಸವರಾಜ ಗಡಾದ, ಉಪತಹಶೀಲ್ದಾರ್ ಎಸ್.ಎಸ್. ಬಿಚ್ಚಾಲಿ, ಕಂದಾಯ ನಿರೀಕ್ಷಕ ಪ್ರಭು ಭಾಗಲಿ, ರೈತ ಮುಖಂಡರಾದ ಮಂಜಯ್ಯಸ್ವಾಮಿ ಅರವಟಿಗಿಮಠ, ಪರಶುರಾಮ ಮುರಡಿ, ಕೆ.ಜಿ. ಕಲ್ಲನಗೌಡ, ಶಾಂತಪ್ಪ ಬರಗಲ್ಲ, ಮಲ್ಲಪ್ಪ ಮಠದ, ರೇವಣಸಿದ್ದಪ್ಪ ಮಠದ, ಬಾಕ್ಷಿಸಾಬ್ ತಾಂಬೋಟಿ, ರಹಿಮನ್ಸಾಬ್ ತಾಂಬೋಟಿ, ನಾಗಪ್ಪ ಅಬ್ಬಿಗೇರಿ, ಲಕ್ಷ್ಮಣ ಮರಡಿ, ವಿರುಪಾಕ್ಷಯ್ಯ ಮುತ್ತಾಳಮಠ, ಅಬ್ದುಲ ತಾಂಬೋಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.