
ನಿಖಿಲ್‌ರಡ್ಡಿ
ಗದಗ: ಇಲ್ಲಿನ ಕ್ರೀಡಾ ವಸತಿನಿಲಯದಲ್ಲಿ ಸೈಕ್ಲಿಂಗ್ ತರಬೇತಿ ಪಡೆಯುತ್ತಿರುವ ನಿಖಿಲ್‌ರಡ್ಡಿ ನಿಂಗರಡ್ಡಿ ತೇರಿನಗಡ್ಡಿ ಭರವಸೆಯ ಸೈಕ್ಲಿಸ್ಟ್ ಆಗಿ ಹೊರಹೊಮ್ಮಿದ್ದಾನೆ. ಇದೇ ವರ್ಷ ಜನವರಿಯಲ್ಲಿ ಒಡಿಶಾದ ಪುರಿಯಲ್ಲಿ ನಡೆದ 29ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಟೀಮ್ ಟೈಮ್ ಟ್ರೈಲ್ ಸ್ಪರ್ಧೆಯಲ್ಲಿ ಭಾಗವಹಿಸಿ, ಪ್ರಥಮ ಸ್ಥಾನ ಪಡೆದಿದ್ದಾನೆ.
2024ರ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಮಿನಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ 10 ಕಿ.ಮೀ. ಸೈಕ್ಲಿಂಗ್ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಗಳಿಸಿದ. ಮೈಸೂರು, ವಿಜಯಪುರ ಜಿಲ್ಲೆಗಳಲ್ಲಿ ನಡೆದ ಸೈಕ್ಲಿಂಗ್ ಸ್ಪರ್ಧೆಯಲ್ಲೂ ಛಾಪು ಮೂಡಿಸಿದ.
ಗದಗ ತಾಲ್ಲೂಕಿನ ಚಿಂಚಲಿ ಗ್ರಾಮದ ನಿಖಿಲ್‌ರಡ್ಡಿಗೆ ಸೈಕ್ಲಿಂಗ್ ಕ್ರೀಡೆ ಬಗ್ಗೆ ಪ್ರೀತಿ, ಆಸಕ್ತಿ ಬೆಳೆಯಲು ಅಪ್ಪನೇ ಕಾರಣ. ಮೂರು ವರ್ಷಗಳಿಂದ ಗದಗ ಕ್ರೀಡಾ ವಸತಿನಿಲಯದಲ್ಲಿ ತರಬೇತಿ ಪಡೆಯುತ್ತಿದ್ದಾನೆ. ಪ್ರಸ್ತುತ 10ನೇ ತರಗತಿ ವಿದ್ಯಾರ್ಥಿ. ನಿಖಿಲ್ ತಂದೆ ನಿಂಗರಡ್ಡಿ ತೇರಿನಗಡ್ಡಿ ಕೂಡ ರಾಷ್ಟ್ರ ಮಟ್ಟದ ಸೈಕ್ಲಿಂಗ್‌ಪಟು. ನಿಖಿಲ್‌ನ ಕಿರಿಯ ಸಹೋದರ ಕೂಡ ಬೆಳಗಾವಿ ಕ್ರೀಡಾ ವಸತಿಶಾಲೆಯಲ್ಲಿ ಸೈಕ್ಲಿಂಗ್ ತರಬೇತಿ ಪಡೆಯುತ್ತಿದ್ದಾನೆ.
‘ಸೈಕ್ಲಿಂಗ್ ಬಗ್ಗೆ ಆಸಕ್ತಿ ಬೆಳೆಯಲು ತಂದೆ ನಿಂಗರಡ್ಡಿ ಅವರೇ ಸ್ಫೂರ್ತಿ. ಅವರಂತೆ ನಾನು ಕೂಡ ಸೈಕ್ಲಿಂಗ್‌ನಲ್ಲಿ ಉತ್ತಮ ಸಾಧನೆ ಮಾಡುವ ಗುರಿ ಜತೆಗೆ ಕಠಿಣ ಅಭ್ಯಾಸ ಮಾಡುತ್ತಿದ್ದೇನೆ’ ಎಂದು ನಿಖಿಲ್ ರೆಡ್ಡಿ ಹೇಳುತ್ತಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.